ಮುಂಬೈ ಟ್ಯಾಕ್ಸಿ ಮಾರುಕಟ್ಟೆಯತ್ತ ಹ್ಯುಂಡೈ ಐ10 ಪಯಣ

By Nagaraja

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಾರುಗಳು ದೇಶದ ಪ್ರಯಾಣಿಕ ವಿಭಾಗದಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಮಾರುತಿ ಸುಜುಕಿ ಬಳಿಕ ಅತಿ ಹೆಚ್ಚಿನ ಬೇಡಿಕೆ ಕಾಯ್ದುಕೊಂಡಿರುವ ಹ್ಯುಂಡೈ ಈಗ ಟ್ಯಾಕ್ಸಿ ವಿಭಾಗದತ್ತವೂ ಎಂಟ್ರಿ ಕೊಡುತ್ತಿದೆ.

ವರದಿಗಳ ಪ್ರಕಾರ ಹ್ಯುಂಡೈ ಐ10 ಮುಂಬೈನ ಟ್ಯಾಕ್ಸಿ ವಿಭಾಗಕ್ಕೆ ಕಾಲಿಡಲಿದೆ. ಆರಂಭದಲ್ಲಿ ಮುಂಬೈನಲ್ಲಿ ಕಪ್ಪು ಹಾಗೂ ಹಳದಿ ವರ್ಣದ ಟ್ಯಾಕ್ಸಿ ಕಾಣಿಸಿಕೊಳ್ಳಲಿದ್ದು, ಬಳಿಕ ದೆಹಲಿ, ಬೆಂಗಳೂರು ಹಾಗೂ ಕೋಲ್ಕತ್ತಾ ನಗರಗಳನ್ನು ಪ್ರವೇಶಿಸಲಿದೆ.

hyundai i10

ಸ್ಯಾಂಟ್ರೊ ಹ್ಯಾಚ್‌ಬ್ಯಾಕ್ ಕಾರಿನ ನಿರ್ಮಾಣವನ್ನು ಸ್ಥಗಿತಗೊಳಿಸದ ಬಳಿಕ ಹ್ಯುಂಡೈ ಐ10 ಇದರ ಸ್ಥಾನವನ್ನು ತುಂಬಲಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ 7,843ಗಳಷ್ಟು ಮುಂಬೈ ಟ್ಯಾಕ್ಸಿಗೆ ಬಳಕೆಗೆ ಅನುಮತಿ ದೊರಕಲಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಹ್ಯುಂಡೈ ಮೋಟಾರು ಇಂಡಿಯಾ ಮಾರಾಟ ಹಾಗೂ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ, "ಕಡಿಮೆ ನಿರ್ವಹಣಾ ವೆಚ್ಚ ದೃಷ್ಟಿಯಲ್ಲಿಟ್ಟುಕೊಂಡು ಹ್ಯುಂಡೈ ಸ್ಯಾಂಟ್ರೊ ಟ್ಯಾಕ್ಸಿ ವಿಭಾಗಕ್ಕೆ ಸೂಕ್ತ ಆಯ್ಕೆಯಾಗಿತ್ತು. ಈ ವಿಭಾಗವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಐ10 ಕಾರನ್ನು ಟ್ಯಾಕ್ಸಿ ವಿಭಾಗಕ್ಕೆ ಪರಿಚಯಿಸಲಾಗುತ್ತಿದೆ" ಎಂದಿದ್ದಾರೆ.

ಕ್ಯಾಬ್ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸಿಎನ್‌ಜಿ ಕಿಟ್ ಆಯ್ಕೆಯನ್ನು ನೀಡಲಾಗುತ್ತದೆ. ಅಲ್ಲದೆ ಬೆಲೆ ಕಡಿತ ಮಾಡುವ ನಿಟ್ಟಿನಲ್ಲಿ ಪವರ್ ಸ್ಟೀರಿಂಗ್ ಹಾಗೂ ಎಸಿ ರಹಿತ ಮಾದರಿಯನ್ನು ಪರಿಚಯಿಸಲಿದೆ. ಮುಂಬೈನಲ್ಲಿ ಪ್ರೀಮಿಯಂ ಪದ್ಮಿನಿ ಓಡಿಸುತ್ತಿದ್ದ 20,000ರಿಂದ 25,000ದಷ್ಟು ಕಾರು ಮಾಲಿಕರೀಗ ಸ್ಯಾಂಟ್ರೊ ಕಾರಿನತ್ತ ಆಕರ್ಷಿತರಾಗಿದ್ದಾರೆ.

Article Published On: Wednesday, December 17, 2014, 14:18 [IST]
English summary
Hyundai Motor, the South Korean carmaker is looking to introduce the i10 to the taxi market in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+