ಹ್ಯುಂಡೈ ಏಷ್ಯಾದ 2ನೇ ಅತ್ಯಂತ ಪ್ರಭಾವಿ ಸಂಸ್ಥೆ
ಹ್ಯುಂಡೈ ಇಂಡಿಯಾ ಸಂಸ್ಥೆಯು ಏಷ್ಯಾದಲ್ಲೇ ಎರಡನೇ ಅತಿ ಪ್ರಭಾವಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೋವೋ ರಿವ್ಯೂ ಆಂಡ್ ಎಫ್‌ಟಿಚೈನೀಸ್ ಡಾಟ್ ಕಾಮ್ (Boao Review And FTChinese.com) ಬಿಡುಗಡೆ ಮಾಡಿರುವ ಏಷ್ಯಾದ 'ಅತ್ಯಂತ ಪ್ರಭಾವಿ ಅಗ್ರ 100 ಕಂಪನಿ'ಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಾಣಿಸಿಕೊಂಡಿದೆ.
ದೇಶದ ಎರಡನೇ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯೂ ಆಗಿರುವ ಹ್ಯುಂಡೈ ಇಂತಹದೊಂದು ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಮೂಲಕ ತನ್ನ ಪ್ರತಿಷ್ಠೆಯನ್ನು ಇಮ್ಮಡಿಗೊಳಿಸಿದೆ.

ಕಾರ್ಪೋರೇಟ್ ಆದಾಯ, ಬೆಳವಣಿಗೆ, ನಾವೀನ್ಯತೆ, ಸಂಶೋಧನೆ, ಬ್ರಾಂಡ್ ಮೌಲ್ಯ, ಜಾಗತಿಕ ಹೆಜ್ಜೆಗುರುತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಪರಿಗಣಿಸಿ ಈ ಪಟ್ಟಿ ತಯಾರಿಸಲಾಗುತ್ತಿದೆ.
ಕೇವಲ ಹ್ಯುಂಡೈ ಮಾತ್ರವಲ್ಲ. ಅಗ್ರ 10ರ ಪಟ್ಟಿಯಲ್ಲಿ ಜಪಾನ್ ಮೂಲದ ಟೊಯೊಟಾ ಕೂಡಾ ಕಾಣಿಸಿಕೊಂಡಿದೆ. ಈ ಮೂಲಕ ಎರಡು ವಾಹನ ತಯಾರಕ ಸಂಸ್ಥೆಗಳು ಅಗ್ರಗಣ್ಯವೆನಿಸಿದೆ.
ಇದು ಜಾಗತಿಕ ಉದ್ಯಮ ವಿಚಾರದಲ್ಲಿ ಧನಾತ್ಮಕ ಬೆಳವಣಿಯೆಗಾಗಿದೆ. ಇದು ಏಷ್ಯಾ ಆರ್ಥಿಕ ಸ್ಥಿತಿ ಏರುಗತಿಯತ್ತ ಸಾಗುತ್ತಿರುವುದರ ಸಂಕೇತವಾಗಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications