ಪ್ಯಾರಿಸ್‌ನಲ್ಲಿ ಅರಳಿದ ಹ್ಯುಂಡೈ ನ್ಯೂ ಜನರೇಷನ್ ಐ20
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2014 ಪ್ಯಾರಿಸ್ ಮೋಟಾರು ಶೋದಲ್ಲಿ ದಕ್ಷಿಣ ಕೊರಿಯಾ ಮೂಲದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಹೊಸ ತಲೆಮಾರಿನ ಐ20 ಮಾದರಿಯನ್ನು ಪ್ರದರ್ಶನಗೊಳಿಸಿದೆ.
ಅತ್ಯಂತ ಹೆಚ್ಚು ಇಂಟಿರಿಯರ್ ಜಾಗ, ಆರಾಮದಾಯಕತೆ ಹಾಗೂ ವಿನ್ಯಾಸದ ವಿಚಾರದಲ್ಲಿ ಹೊಸ ಹ್ಯುಂಡೈ ಕಾರು ಯಾವುದೇ ರಾಜಿಗೂ ತಯಾರಾಗಿಲ್ಲ. ಇದು ಪ್ರೀಮಿಯಂ ಗುಣಮಟ್ಟದ ಪ್ಯಾಕೇಜ್ ಸಹ ಪಡೆದುಕೊಳ್ಳಲಿದೆ.

ಸಂಪೂರ್ಣವಾಗಿಯೂ ಯುರೋಪ್‌ನ ಜರ್ಮನಿಯಲ್ಲಿ ವಿನ್ಯಾಸ ಹಾಗೂ ನಿರ್ಮಾಣ ಮಾಡಲಾಗಿರುವ ನ್ಯೂ ಜನರೇಷನ್ ಐ20ನಲ್ಲಿರುವ 1.0 ಲೀಟರ್ ಟಿಜಿಡಿಐ ಎಂಜಿನ್ 120 ಪಿಎಸ್ (172 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯುಂಡೈ ಮೋಟಾರು ಯುರೋಪ್ ಸಿಒಒ ಮತ್ತು ಹಿರಿಯ ಉಪಾಧ್ಯಕ್ಷರಾಗಿರುವ ಅಲನ್ ರಷ್‌ಫೋರ್ತ್, ಠಹ್ಯುಂಡೈ ಐ20 ಪೂರ್ಣವಾಗಿಯೂ ಯುರೋಪ್ ಕಾರಾಗಲಿದ್ದು, ಇದನ್ನು ಪ್ಯಾರಿಸ್‌ನಲ್ಲಿ ಅನಾವರಣಗೊಳಿಸಲು ಸಾಧ್ಯವಾಗಿರುವುದರಲ್ಲಿ ಹೆಮ್ಮೆಯಾಗುತ್ತಿದೆ" ಎಂದಿದ್ದಾರೆ.


Click it and Unblock the Notifications








