ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಯಾವಾಗ?
ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆಯನ್ನು ಎಲ್ಲ ಗ್ರಾಹಕರನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಇದರಂತೆ ಸಿಹಿ ಸುದ್ದಿ ಬಿತ್ತರಿಸಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಇಂಡಿಯಾ ಸಂಸ್ಥೆಯು, ಇದೇ ಬರುವ ಮಾರ್ಚ್ 12ರಂದು ಲಾಂಚ್ ಮಾಡುವುದಾಗಿ ತಿಳಿಸಿದೆ.
ಇತ್ತೀಚೆಗಷ್ಟೇ ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿದ್ದ ಹ್ಯುಂಡೈ ಎಕ್ಸ್‌ಸೆಂಟ್, ಪ್ರಮುಖವಾಗಿಯೂ ಹ್ಯುಂಡೈ ಐ10 ಹ್ಯಾಚ್‌ಬ್ಯಾಕ್ ಕಾರಿನ ತಲಹದಿಯಲ್ಲಿ ನಿರ್ಮಿಸಲಾಗಿದೆ.

ವಿನ್ಯಾಸದ ವಿಚಾರಕ್ಕೆ ಬಂದಾಗ ಗ್ರಾಂಡ್ ಐ10 ಆವೃತ್ತಿ ಸಾಮ್ಯತೆ ಪಡೆದುಕೊಂಡಿದ್ದರೂ ಹಿಂದುಗಡೆ ಹೆಚ್ಚಿನ ಬೂಟ್ ಸ್ಪೇಸ್ ನೀಡುವಲ್ಲಿ ಈ ಕಾಂಪಾಕ್ಟ್ ಸೆಡಾನ್ ಕಾರು ಯಶಸ್ಸು ಕಂಡಿದೆ. ಇಷ್ಟೆಲ್ಲ ಆದರೂ ತೆರಿಗೆ ವಿನಾಯಿತಿರುವ ನಾಲ್ಕು ಮೀಟರ್ ಪರಿಧಿಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ಸನ್ನು ಕಂಡಿದೆ. ಪ್ರಸ್ತುತ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು, ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹೋಂಡಾ ಅಮೇಜ್ ಆವೃತ್ತಿಗೆ ಸೆಡ್ಡು ನೀಡಲಿದೆ.
ಇನ್ನು ಗ್ರಾಂಡ್ ಐ10 ಮಾದರಿಗೆ ಪರಿಗಣಿಸಿದಾಗ ಹ್ಯುಂಡೈ ಎಕ್ಸ್‌ಸೆಂಟ್ ಒಳಭಾಗದಲ್ಲೂ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಇದು ಸಮಾನವಾದ ಡ್ಯಾಶ್ ಬೋರ್ಡ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಸನಗಳನ್ನು ಪಡೆದುಕೊಳ್ಳಲಿದೆ. ಹಾಗಿದ್ದರೂ ಟಾಪ್ ಎಂಡ್ ವೆರಿಯಂಟ್ ಕ್ಲೈಮೈಟ್ ಕಂಟ್ರೋಲ್ ಮತ್ತು ಹೆಚ್ಚಿನ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಇವೆಲ್ಲದಕ್ಕೂ ಮಿಗಿಲಾಗಿ ಹ್ಯುಂಡೈ ಎಕ್ಸ್‌ಸೆಂಟ್ ಆಟೋಮ್ಯಾಟಿಕ್ ವೆರಿಯಂಟ್‌ನಲ್ಲಿ ಎಬಿಎಸ್ ಸೌಲಭ್ಯ ಲಭ್ಯವಿರಲಿದೆ. ಅಂತಿಮವಾಗಿ ಎಂಜಿನ್ ಬಗ್ಗೆ ಮಾತನಾಡವುದಾದ್ಧಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.1 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.


Click it and Unblock the Notifications








