ದೆಹಲಿಯಿಂದ ಆಗ್ರಾ; ದೇಶದ ಅತಿ ವೇಗದ ರೈಲು ಪರೀಕ್ಷೆ ಯಶಸ್ವಿ
ದೆಹಲಿಯಿಂದ ಆಗ್ರಾ ವರೆಗಿನ ದೇಶದ ಅತಿ ವೇಗದ ರೈಲಿನ ಪರೀಕ್ಷೆ ಗುರುವಾರ ಯಶಸ್ವಿಯಾಗಿ ನೇರವಾಗಿದೆ. ಪ್ರಸ್ತುತ ರೈಲು ಗಂಟೆಗೆ 160 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.
ದೆಹಲಿ-ಆಗ್ರಾ ನಡುವಣ ಪ್ರಯಾಣಿಕ ಓಡಾಟವನ್ನು ಇನ್ನಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಈ ಸೆಮಿ ಹೈ ಸ್ಪೀಡ್ ರೈಲು ನವೆಂಬರ್ ತಿಂಗಳಿಂದ ಸಾರ್ವಜನಿಕ ಮುಕ್ತವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಸೇವೆಯಿಂದಾಗಿ ದೆಹಲಿ-ಆಗ್ರಾ ನಡುವಣ ಪಯಣದ ಅವಧಿಯಲ್ಲಿ 30 ನಿಮಿಷಗಳಷ್ಟು ಇಳಿಕೆಯಾಗಲಿದ್ದು, 120 ನಿಮಿಷಗಳಿಂದ 90 ನಿಮಿಷಗಳಲ್ಲಿ ದೂರವನ್ನು ಕ್ರಮಿಸಲಿದೆ.
200 ಕೀ.ಮೀ. ಅಂತರವಿರುವ ಮಹತ್ತರ ಹಳಿ ಯೋಜನೆಗೆ 15 ಕೋಟಿ ರುಪಾಯಿ ತಗುಲಲಿದೆ. ಸದ್ಯ ಪ್ರಯೋಗಾರ್ಥ ಪರೀಕ್ಷೆಯು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ದೀರ್ಘ ಪ್ರಯಾಣದ ಹಾದಿಯಲ್ಲೂ ಈ ಯೋಜನೆ ಜಾರಿಗೆ ತರುವ ಸಾಧ್ಯತೆಯಿದೆ. ಈ ಮೂಲಕ ರೈಲುಗಳ ವೇಗವನ್ನು ಹೆಚ್ಚಿಸಲಿದೆ.



Click it and Unblock the Notifications








