ಭಾರತದಲ್ಲಿ ಮಾರಾಟದ ಪ್ರತಿ ಎರಡು ಕಾರುಗಳಲ್ಲಿ ಒಂದು ಬಿಳಿ ಬಣ್ಣ
ನಿಮಗೆ ಯಾವ ಬಣ್ಣದ ಕಾರು ಇಷ್ಟ? ಬಿಳಿ, ಕೆಂಪು, ನೀಲಿ, ಕಪ್ಪು ಹೀಗೆ ಬಣ್ಣ ಬಣ್ಣದ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವರದಿಯೊಂದರ ಪ್ರಕಾರ ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರತಿ ಎರಡು ಕಾರುಗಳ ಪೈಕಿ ಒಂದು ಬಿಳಿ ಬಣ್ಣವನ್ನು ಹೊಂದಿರುತ್ತದೆಯಂತೆ!
ದೇಶದಲ್ಲಿ ಮಾರಾಟದಲ್ಲಿ ವಿವಿಧ ವಾಹನ ತಯಾರಕ ಸಂಸ್ಥೆಗಳಲ್ಲಿ ನಡೆಸಿರುವ ಅಧ್ಯಯನದಲ್ಲಿ ಈ ವಿಚಾರ ಬಯಲಾಗಿದೆ.

ಹೋಂಡಾ ಮಾರಾಟ ಅಂಕಿಅಂಶಗಳ ಪ್ರಕಾರ ಬಿಳಿ ಜೊತೆಗೆ ಬೆಳ್ಳಿ ಹಾಗೂ ಅರ್ಬನ್ ಟೈಟಾನಿಯಂ ಗ್ರಾಹಕರಿಗೆ ಅಚ್ಚುಮೆಚ್ಚಿನ ಕಾರೆನಿಸಿಕೊಂಡಿದೆ ಎಂದು ಹೋಂಡಾ ಕಾರ್ಸ್ ಮಾರ್ಕೆಟಿಂಗ್ ಆಂಡ್ ಸೇಲ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ಜ್ಞಾನೇಶ್ವರ ಸೆನ್ ತಿಳಿಸಿದ್ದಾರೆ.
ಬಿಳಿ ಕಾರಿನ ಮೇಲೆ ಭಾರತೀಯರ ಆಸಕ್ತಿಯ ಬಗ್ಗೆ ಮಾತನಾಡಿರುವ ಅವರು, ಬಳಿ ಕಾರುಗಳ ನಿರ್ವಹಣೆ, ಹಕ್ಕಣೆ ತಕ್ಕ ಮೌಲ್ಯ, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಹಾಗೂ ಭಾರತೀಯ ಹವಾಮಾನ ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ ಬಿಸಿಲಿನಲ್ಲಿ ನಿಲ್ಲಿಸಿದ ಕಪ್ಪು ಬಣ್ಣಗಳ ಕಾರುನೊಳಗೂ ಬೇಗನೇ ಬಿಸಿಯಾಗಿಬಿಡುತ್ತದೆ.
2013 ಮಾರಾಟ ಪ್ರಕಾರ ಕಪ್ಪು ಬಣ್ಣಗಿಂತಲೂ (7%) ಮಿಗಿಲಾಗಿ ಮರೂನ್ (ಕೆಂಗಂದು) ಜೊತೆಗೆ ಕೆಂಪು ಬಣ್ಣಗಳನ್ನು (14%) ಗ್ರಾಹಕರು ಬಯಸಿದ್ದಾರೆ. ಇನ್ನು ಉತ್ತರ ಭಾರತದಲ್ಲಿ ಮಾರಾಟವಾಗಿರುವ ಒಟ್ಟು ಕಾರುಗಳ ಶೇಕಡಾ 66% ಬಿಳಿ ಕಾರುಗಳಾಗಿವೆ ಎಂದು ಜೆಡಿ ಪವರ್ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ದಕ್ಷಿಣ ಭಾರತದಲ್ಲಿ ಇದರ ಪ್ರಮಾಣ ಶೇಕಡಾ 34ರಷ್ಟಾಗಿದೆ. ದಕ್ಷಿಣ ಹಾಗೂ ಪಶ್ಚಿಮ ಭಾಗದವರು ಕೆಂಪು ಹಾಗೂ ಮರೂನ್ ಬಣ್ಣದತ್ತ (14%) ಆಕರ್ಷಿತರಾಗಿರುತ್ತಾರೆ. ಇದು ಪೂರ್ವದಲ್ಲಿ ಶೇಕಡಾ 14ರಷ್ಟಾಗಿದೆ.
ಸೆಗ್ಮೆಂಟ್‌ಗಳ ಮೇಲೂ ಬಣ್ಣಗಳ ಆಯ್ಕೆ ನಿರ್ಭರವಾಗಿರುತ್ತದೆ. ಏಕೆಂದರೆ ಶೇಕಡಾ 66ರಷ್ಟು ಐಷಾರಾಮಿ ಕಾರು ಖರೀದಿಗಾರರು ಬಿಳಿ ಬಣ್ಣವನ್ನು ಆಯ್ಕೆ ಮಾಡುತ್ತಾರೆ. ಇಲ್ಲಿ ಕಪ್ಪು ಬಣ್ಣವನ್ನು ಶೇಕಡಾ 12ರಷ್ಟು ಇಷ್ಟಪಡುತ್ತಾರೆ. ಅದೇ ರೀತಿ ಭಾರತೀಯ ಗ್ರಾಹಕರು ಶುಭ್ರವಾದ ಕಾರು ಒಳಮೈ ಹಾಗೂ ಟು ಟೋನ್ ಇಂಟಿರಿಯರ್ ಇಷ್ಟಪಡುತ್ತಾರೆ.
ಆಡಿ ಪ್ರಕಾರ ಹಿಂದೆಲ್ಲ ಕಪ್ಪು ಹಾಗೂ ಬಿಳಿ ಬಣ್ಣದ ಆಯ್ಕೆಗಳು ಮಾತ್ರ ಇದ್ದವು. ಆದರೆ ಇದೀಗ ಆಯ್ಕೆಗಳು ಹೆಚ್ಚಿದಂತೆ ಕೆಂಪು ಬಣ್ಣದ ಕಾರುಗಳನ್ನು ಗ್ರಾಹಕರು ಬಯಸುತ್ತಾರೆ. ಉದಾಹರಣೆಗೆ ಕೆಂಪು ವರ್ಣದ ಆಡಿ ಆರ್8, ಆರ್7, ಆರ್‌ಎಸ್5, ಎಸ್6, ಎಸ್4 ಮತ್ತು ಟಿಟಿ ಶ್ರೇಣಿಯ ಸ್ಪೋರ್ಟ್ಸ್ ಕಾರುಗಳು ಹೆಚ್ಚು ಮಾರಾಟವಾಗುತ್ತಿದೆ.


Click it and Unblock the Notifications








