ಸೆಪ್ಟೆಂಬರ್‌ನಲ್ಲಿ ಲಂಬೊರ್ಗಿನಿ ಹ್ಯುರಕೇನ್ ಸೂಪರ್ ಕಾರು ಲಾಂಚ್
ಲಂಬೊರ್ಗಿನಿ ನೂತನ ಸೂಪರ್ ಕಾರು ಹ್ಯುರಕೇನ್ ಎಲ್‌ಪಿ 610-4 ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಭರ್ಜರಿ ಕಾಣಲಿದೆ. ಈಗಾಗಲೇ 2014 ಜಿನೆವಾ ಮೋಟಾರು ಶೋದಲ್ಲಿ ಅನಾವರಣಗೊಂಡಿರುವ ಹ್ಯುರಕೇನ್, ಲಂಬೊರ್ಗಿನ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಗಲರ್ಡೊ ಬದಲಿ ಕಾರಾಗಿರಲಿದೆ.
ನೂತನ ಲಂಬೊರ್ಗಿನಿ ಗಲರ್ಡೊ ಬಿಡುಗಡೆ ಮುನ್ನವೇ ತನ್ನ ಬೇಟೆಯನ್ನು ಆರಂಭಿಸಿದೆ. ವರದಿಗಳ ಪ್ರಕಾರ ಲಂಬೊರ್ಗಿನಿ ಗಲರ್ಡೊ ಈಗಾಗಲೇ 1,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ. ಇದರಲ್ಲಿ ಆಳವಡಿಸಲಾಗಿರುವ ಪವರ್‌ಫುಲ್ ಎಂಜಿನ್ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿದೆ.

ಚೂಪಾದ ದೇಹ ವಿನ್ಯಾಸವನ್ನು ಪಡೆದುಕೊಂಡಿರುವ ಲಂಬೊರ್ಗಿನಿ ಗಲರ್ಡೊ, ಸೂಪರ್ ಕಾರುಗಳಿಗೆ ಹೊಸ ಚೈತನ್ಯವನ್ನು ತುಂಬಲಿದೆ.
ಇನ್ನು ಭಾರ ಕಡಿತಗೊಳಿಸುವ ಮೂಲಕ ಹೆಚ್ಚಿನ ಇಂಧನ ಕ್ಷಮತೆ ನೀಡುವ ನಿಟ್ಟಿನಲ್ಲಿ ಚಾಸೀಸ್ ಅನ್ನು ಕಾರ್ಬನ್ ಹಾಗೂ ಅಲ್ಯೂಮಿನಿಯಂ ಪರಿಕರಗಳಿಂದ ನಿರ್ಮಿಸಲಾಗಿದೆ. ಇದು 1,422 ಕೆ.ಜಿ ಭಾರವನ್ನು ಹೊಂದಿದೆ.

ನೂತನ ಹ್ಯುರಕೇನ್ ಸೂಪರ್ ಕಾರಿನಲ್ಲಿ 5.2 ಲೀಟರ್ ವಿ10 ಎಂಜಿನ್ ಆಳವಡಿಸಲಾಗಿದ್ದು, 602 ಅಶ್ವಶಕ್ತಿ (560 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.
ಪ್ರಸ್ತುತ ಕಾರು ಕೇವಲ 3.2 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ಅದೇ ರೀತಿ ಗಂಟೆಗೆ ಗರಿಷ್ಠ 325 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇನ್ನು ವರದಿಗಳ ಪ್ರಕಾರ ಲಂಬೊರ್ಗಿನಿ ಗಲರ್ಡೊ 3.5 ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.



Click it and Unblock the Notifications








