ಇಟಲಿ ಪೊಲೀಸ್ ತೆಕ್ಕೆಗೆ ಲಂಬೋರ್ಗಿನಿ ಸೂಪರ್ ಕಾರು
ಇದುವರೆಗೆ ದುಬೈ ಪೊಲೀಸ್, ಐಷಾರಾಮಿ ಲಂಬೋರ್ಗಿನಿ ಕಾರುಗಳ ಖರೀದಿಗೆ ಸುದ್ದಿಯಾಗುತ್ತಿದ್ದವು. ಆದರೆ ಇದೀಗ ಲಂಬೋರ್ಗಿನಿ ಸೂಪರ್ ಕಾರಿನ ತವರೂರಾದ ಇಟಲಿಯ ಪೊಲೀಸ್ ಕೂಡಾ ತಾವೇನೂ ಕಮ್ಮಿಯೇನಲ್ಲ ಎಂದು ತೊಡೆ ತಟ್ಟಿ ನಿಂತಿದೆ.
ಹೌದು, ಇಟಲಿಯ ಪೊಲೀಸ್ ಬತ್ತಳಿಕೆಗೆ ಲಂಬೋರ್ಗಿನಿ ಚೆಲುವೆಯ ಪ್ರವೇಶವಾಗಿದೆ. ಇಟಲಿ ಮೂದದವರೇ ಆಗಿರುವ ಲಂಬೋರ್ಗಿನಿ, ಇತ್ತೀಚೆಗಷ್ಟೇ ಅತ್ಯಾಕರ್ಷಕ ಹ್ಯುರಕೇನ್ ಎಲ್‌ಪಿ 610-4 ಸೂಪರ್ ಕಾರನ್ನು ( Italian Polizia) ಇಟಲಿಯ ಪೊಲೀಸ್‌ಗೆ ಕೊಡುಗೆಯಾಗಿ ನೀಡಿದೆ.

ನೀಲಿ ಕಂಗಳ ಈ ಲಂಬೋರ್ಗಿನಿ ಸೂಪರ್ ಕಾರು ಇನ್ನು ಇದೀಗ ಇಟಲಿಯ ರಸ್ತೆಗಳಲ್ಲಿ ಗಸ್ತು ತಿರುಗಲಿದೆ. ಇದರಂತೆ ನಡೆದ ಸಮಾರಂಭದಲ್ಲಿ ಲಂಬೋರ್ಗಿನಿ ಸಿಇಒ, 610 ಅಶ್ವಶಕ್ತಿ ಉತ್ಪಾದಿಸುವ ಸೂಪರ್ ಕಾರನ್ನು ಇಟಲಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು.

5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಲಂಬೋರ್ಗಿನಿ ಹ್ಯುರಕೇನ್ ಎಲ್‌ಪಿ 610-4, 610 ಅಶ್ವಶಕ್ತಿಯಿಂದ ಉತ್ಪಾದಿಸಲ್ಪಡುತ್ತಿದ್ದು, ಕೇವಲ 3.2 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಕೇವಲ 9.9 ಸೆಕೆಂಡುಗಳಲ್ಲಿ ವೇಗವರ್ಧಿಸಲಿದೆ.

ವರ್ಷಾಂತ್ಯದಲ್ಲಿ ಇಟಲಿ ಪೊಲೀಸ್ ಸೇವೆಗೆ ಮುಕ್ತವಾಗಲಿರುವ ಲಂಬೋರ್ಗಿನಿ ಹ್ಯುರಕೇನ್, ಮೇಲ್ಛಾವಣಿಯಲ್ಲಿ ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಿರುವ ದೀಪವಿದೆ. ಹಾಗೆಯೇ ನೀಲಿ ಬಣ್ಣದ ಎಲ್‌ಇಡಿ ಇನ್ನಷ್ಟು ಆಕರ್ಷಣೀಯವಾಗಿದೆ.

ಇನ್ನು ಇಟಲಿ ಪೊಲೀಸ್ ಅಗತ್ಯಗಳಿಗಾನುಸಾರವಾಗಿ ಕೆಲವೊಂದು ಬದಲಾವಣೆ ತರಲಾಗಿದೆ. ಅಲ್ಲದೆ ಗರಿಷ್ಠ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ.

ಕಾರಿನೊಳಗೂ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಮೊರೆ ಹೋಗಲಾಗಿದ್ದು, ಅಧಿಕಾರಿಗಳಿಗೆ ತಕ್ಷಣ ಮಾಹಿತಿ ಒದಗಿಸಿಕೊಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆಯೇ ವೀಡಿಯೋ ಕ್ಯಾಮೆರಾ ಸಹ ಲಗತ್ತಿಸಲಾಗಿದೆ.

ಮಗದೊಂದು ವೈಶಿಷ್ಟ್ಯವೆಂದರೆ ಲಂಬೋರ್ಗಿನಿ ಹ್ಯುರಕೇನ್ ಕಾರನ್ನು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆಗಳಿಗಾಗಿಯೂ ಬಳಕೆ ಮಾಡಬಹುದಾಗಿದೆ.


Click it and Unblock the Notifications








