ದಕ್ಷಿಣ ಭಾರತ ಟಾರ್ಗೆಟ್; ಬೆಂಗಳೂರಿನಲ್ಲಿ ಲಂಬೋ ಶೋ ರೂಂ ಆರಂಭ
ದಕ್ಷಿಣ ಭಾರತದಲ್ಲಿ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ ಇಟಲಿಯ ಐಕಾನಿಕ್ ಸೂಪರ್ ಲಗ್ಷುರಿ ಸ್ಪೋರ್ಟ್ಸ್ ಕಾರು ತಯಾರಿಕ ಸಂಸ್ಥೆಯಾಗಿರುವ ಲಂಬೋರ್ಗಿನಿ, ಬೆಂಗಳೂರಿನ ಹೃದಯ ಭಾಗದಲ್ಲಿ ಚೊಚ್ಚಲ ಶೋ ರೂಂ ತೆರೆದುಕೊಂಡಿದೆ.
ಇದರೊಂದಿಗೆ ದೇಶದಲ್ಲಿ ಲಂಬೋರ್ಗಿನಿ ವಿತರಕ ಜಾಲದ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ನವದಹೆಲಿ ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿ ಉಳಿದೆರಡು ಡೀಲರ್‌ಗಳನ್ನು ಲಂಬೋರ್ಗಿನಿ ಹೊಂದಿದೆ.

ಲಂಬೋರ್ಗಿನಿ ಬೆಂಗಳೂರು ವಿಳಾಸ:
Hoysala Automotives Pvt. Ltd.
# 19/1 Doddamane,
Near Vittal Mallya Road-Lavelle Road Junction,
Bengaluru - 560001
4350 ಚದರ ಅಡಿ ಪ್ರದೇಶದಲ್ಲಿ ಹರಡಿಕೊಂಡಿರುವ ಲಂಬೋರ್ಗಿನಿ ಬೆಂಗಳೂರು ಶೋ ರೂಂನಲ್ಲಿ ಅವೆಂಟಡೊರ್ ರೋಡ್‌ಸ್ಟರ್ ಎಲ್ ಪಿ 700-4, ಅವೆಂಟಡೊರ್ ಕೂಪೆ ಎಲ್ ಪಿ 700-4 ಮತ್ತು ಇತ್ತೀಚೆಗಷ್ಟೇ ಬಿಡುಗೆಯಾಗಿದ್ದ ಹ್ಯುರಕನ್ ಎಲ್ ಪಿ 610-4 ಕಾರುಗಳನ್ನು ಪ್ರದರ್ಶಿಸಲಾಗುವುದು. ಇದು ಗ್ರಾಹಕರಿಗೆ ಅದ್ಭುತ ಅನುಭವ ನೀಡಲಿದೆ.
ನೂತನ ಶೋ ರೂಂ ಉದ್ಘಾಟನೆ ಮಾಡುತ್ತಾ ಪ್ರತಿಕ್ರಿಸಿರುವ ಆಟೋಮೊಬೈಲ್ ಲಂಬೋರ್ಗಿನಿ (Automobili Lamborghini) ಸಿಇಒ ಹಾಗೂ ಅಧ್ಯಕ್ಷರಾಗಿರುವ ಸ್ಟಿಫನ್ ವಿಂಕಲ್‌ಮ್ಯಾನ್, "ಭಾರತದ ಗ್ರಾಹಕರು ಸೂಪರ್ ಲಗ್ಷುರಿ ಕಾರುಗಳನ್ನು ಖರೀದಿಸುವಷ್ಟು ಸಮರ್ಥವಾಗಿದ್ದು, ಇದನ್ನು ಸಂಸ್ಥೆಯು ಅರಿತುಕೊಂಡಿದೆ. ಹಾಗೆಯೇ ದೇಶದ ಮೇಲಿನ ಬದ್ಧತೆಯನ್ನು ಮುಂದುವರಿಸಲಿದೆ" ಎಂದಿದ್ದಾರೆ.


Click it and Unblock the Notifications








