ಲಂಬೋರ್ಗಿನಿ ಚೊಚ್ಚಲ ಪ್ಲಗ್ ಇನ್ ಹೈಬ್ರಿಡ್ ಸೂಪರ್ ಕಾರು ಅನಾವರಣ
ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೋರ್ಗಿನಿ, ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಮೋಟಾರು ಶೋದಲ್ಲಿ ಹೊಸ ಸೂಪರ್ ಕಾರೊಂದನ್ನು ಅನಾವರಣಗೊಳಿಸಿದೆ.
ಪ್ಯಾರಿಸ್‌ನಲ್ಲಿ ಅನಾವರಣಗೊಂಡಿರುವ ಲಂಬೋರ್ಗಿನಿ ಎಲ್‌ಪಿಐ 910-4 ಆಸ್ಟ್ರೆರಿಯನ್ ಸಂಸ್ಥೆಯ ಚೊಚ್ಚಲ ಪ್ಲನ್ ಇನ್ ಹೈಬ್ರಿಡ್ ಮಾದರಿಯಾಗಿರಲಿದೆ.

ಈ ಮೂಲಕ ಭವಿಷ್ಯದ ವಾಹನ ನಿರ್ಮಿಸುವುದರಲ್ಲಿ ಇಟಲಿಯ ಈ ಐಕಾನಿಕ್ ಸಂಸ್ಥೆಯು ಸಹ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.
ಅಷ್ಟೇ ಯಾಕೆ ಪ್ಲಗ್ ಇನ್ ಹೈಬ್ರಿಡ್ ಕಾನ್ಸೆಪ್ಟ್ ತಯಾರಿಸಲು ಮುಂದೆ ಬಂದಿರುವ ಮೊದಲ ಸೂಪರ್ ಕಾರು ತಯಾರಕ ಸಂಸ್ಥೆಯೆಂಬ ಹೆಗ್ಗಳಿಕೆಗೂ ಲಂಬೋರ್ಗಿನಿ ಪಾತ್ರವಾಗಲಿದೆ.

ಲಂಬೋರ್ಗಿನಿಯ ಹೈಬ್ರಿಡ್ ಮಾದರಿಯು ನನಸಾದ್ದಲ್ಲಿ ವಾಹನೋದ್ಯಮದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಯಾಗಲಿದೆ. ಇದರೊಂದಿಗೆ ಪರಿಸರ ಸ್ನೇಹಿ ವಾಹನ ಬಳಕೆಗೆ ಇಟಲಿಯ ಈ ಸೂಪರ್ ಕಾರು ಸಹ ಕೈಜೋಡಿಸಿಕೊಳ್ಳಲಿದೆ.

ಎಲೆಕ್ಟ್ರಿಕ್ ಮೋಟಾರು ಜೊತೆಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿರುವ 5.2 ಲೀಟರ್ ವಿ10 ಎಫ್‌ಎಸ್‌ಐ ಎಂಜಿನ್ ಅನ್ನು ಲಂಬೋರ್ಗಿನಿ ಸೂಪರ್ ಕಾರು ಹೊಂದಿರಲಿದೆ. ಇನ್ನು ಕಾರಿನ ಒಳಮೈ ವಿನ್ಯಾಸಕ್ಕೂ ಹೆಚ್ಚಿನ ಆದ್ಯತೆ ಕೊಡಲಾಗಿದೆ.


Click it and Unblock the Notifications








