ಇನ್ನು ಮುಂದೆ ಐಷಾರಾಮಿ ಬಸ್‌ಗಳಲ್ಲೂ 'ಬ್ಲ್ಯಾಕ್ ಬಾಕ್ಸ್'

By Nagaraja

ಕಳೆದ ವರ್ಷ ಸುದ್ದಿಯೊಂದನ್ನು ಪ್ರಕಟಿಸಿದ್ದೆವು. ದೇಶದ ವಾಹನೋದ್ಯಮ ಇತಿಹಾಸದಲ್ಲೇ ಮೊದಲ ಬಾರಿಯೆಂಬಂತೆ ನಮ್ಮ ಕರ್ನಾಟಕದಲ್ಲಿ 'ಬ್ಲ್ಯಾಕ್ ಬಾಕ್ಸ್' ಮಾದರಿಯ ಡ್ರಾಪ್ಸ್ ಬಾಕ್ಸ್ ತಂತ್ರಜ್ಞಾನವನ್ನು ಆವಿಷ್ಕರಿಸಿತ್ತು. (ಇಲ್ಲಿ ಓದಿರಿ)

ವೋಲ್ವೋ ಬಸ್ಸಿನಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳು

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇದನ್ನು ಪ್ರಾಯೋಗಿಕವಾಗಿ ಆಳವಡಿಸಲಾಗಿತ್ತು. ಆಸ್ಟ್ರೇಲಿಯಾದ ಡೇವಿಡ್ ವಾರೆನ್ ಕನಸಿನ ಕೂಸು ಆಗಿರುವ ಕಪ್ಪು ಪೆಟ್ಟಿಗೆ ವಿಮಾನ ಅಪಘಾತ ಸಂದರ್ಭಗಳಲ್ಲಿ ನಿಖರ ಕಾರಣಗಳನ್ನು ತಿಳಿಯಲು ನೆರವಾಗುತ್ತದೆ. (ಇಲ್ಲಿ ಓದಿರಿ- ಏನಿದು ಬ್ಲ್ಯಾಕ್ ಬಾಕ್ಸ್)

ಬಸ್ಸಿನಲ್ಲಿ ಪಯಣಿಸುವಾಗ ಅನುಸರಿಬೇಕಾದ ಸುರಕ್ಷಾ ಕ್ರಮಗಳು

ಪ್ರಸ್ತುತ ತಂತ್ರಜ್ಞಾನ ಐಷಾರಾಮಿ ಬಸ್ಸುಗಳಿಗೂ ಆಳವಡಿಕೆಯಾಗುವ ಕಾಲ ಸನ್ನಿಹಿತವಾಗಿದೆ. ಪದೇ ಪದೇ ಸಂಭವಿಸುತ್ತಿರುವ ಬಸ್ ದುರಂತಗಳಿಂದಾಗಿ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಗರಿಷ್ಠ ಸುರಕ್ಷತೆಯನ್ನು ಖಾತ್ರಿ ಪಡಿಸುವುದರತ್ತ ಗಮನ ಹರಿಸಿರುವುದು ಸ್ವಾಗತಾರ್ಹವಾಗಿದೆ.

ಇನ್ನು ಮುಂದೆ ಐಷಾರಾಮಿ ಬಸ್‌ಗಳಲ್ಲೂ 'ಬ್ಲ್ಯಾಕ್ ಬಾಕ್ಸ್'

ವಿಮಾನಗಳಂತೆ ಐಷಾರಾಮಿ ಬಸ್ಸುಗಳಲ್ಲೂ ಪ್ರಯಾಣ ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಬ್ಲ್ಯಾಕ್ ಬಾಕ್ಸ್ ಆಳವಡಿಸುವ ಕುರಿತಂತೆ ಪ್ರಸ್ತಾಪ ಮುಂದಿಡಲಾಗಿದೆ.

ಇನ್ನು ಮುಂದೆ ಐಷಾರಾಮಿ ಬಸ್‌ಗಳಲ್ಲೂ 'ಬ್ಲ್ಯಾಕ್ ಬಾಕ್ಸ್'

ಕೇವಲ ಬ್ಲ್ಯಾಕ್ ಬಾಕ್ಸ್ ಅಷ್ಟೇ ಅಲ್ಲ ಪ್ರತಿಯೊಂದು ಸೀಟಿಗೂ ಸೀಟು ಬೆಲ್ಟ್ ಆಳವಡಿಸಲಾಗುವುದು. ಅಲ್ಲದೆ ಐಷಾರಾಮಿ ಬಸ್ಸುಗಳಲ್ಲಿ ಸ್ಪೀಡ್ ಗವರ್ನರ್ ಲಗತ್ತಿಸುವ ಬಗ್ಗೆಯೂ ಆಲೋಚನೆಯಲ್ಲಿದೆ. ಸದ್ಯ ಎರಡು ಸೀಟುಗಳಿಗೆ ಮಾತ್ರ ಸೀಟು ಬೆಲ್ಟ್ ಲಭ್ಯವಿದೆ.

ಇನ್ನು ಮುಂದೆ ಐಷಾರಾಮಿ ಬಸ್‌ಗಳಲ್ಲೂ 'ಬ್ಲ್ಯಾಕ್ ಬಾಕ್ಸ್'

ಪ್ರಸ್ತುತ ಎಲ್ಲವೂ ಪ್ರಾಥಮಿಕ ಹಂತದಲ್ಲಿದ್ದು, ಇದೇ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ. ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ವೋಲ್ವೋ ಮತ್ತು ಸ್ಕಾನಿಯಾದಂತಹ ಐಷಾರಾಮಿ ಬಸ್ ತಯಾರಕ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮುಂದೆ ಐಷಾರಾಮಿ ಬಸ್‌ಗಳಲ್ಲೂ 'ಬ್ಲ್ಯಾಕ್ ಬಾಕ್ಸ್'

ಚಾಲಕರ ಅಜಾಗರೂಕತೆ ಅಥವಾ ಬಿಡುವಿಲ್ಲದ ಕೆಲಸದಿಂದಾಗಿಯೇ ದುರಂತಗಳು ಘಟಿಸುತ್ತವೆ. ಇದನ್ನು ತಡೆಯುವ ನಿಟ್ಟಿನಿಲ್ಲಿ ಚಾಲಕರು ಎಷ್ಟು ಹೊತ್ತು ಚಾಲನೆ ಮಾಡಬಹುದು ಎಂಬುದನ್ನು ತೀಮಾರ್ನಿಸಲಿದ್ದಾರೆ.

ಇನ್ನು ಮುಂದೆ ಐಷಾರಾಮಿ ಬಸ್‌ಗಳಲ್ಲೂ 'ಬ್ಲ್ಯಾಕ್ ಬಾಕ್ಸ್'

ಇವೆಲ್ಲದರ ಜೊತೆಗೆ ಸಾಮಾನ್ಯ ಸ್ಟಾಂಡರ್ಡ್ ಬಸ್ ಕೋಡ್ ಬಳಕೆ ಬಗ್ಗೆಯೂ ನಿರ್ಧಾರವುಂಟಾಗಲಿದೆ. ಇದು ಬಸ್ ನಿರ್ಮಾಣ ವೇಳೆ ಬೇಗನೇ ಆಗ್ನಿಸ್ಪರ್ಶವಾಗದಂತಹ ಬಿಡಿಭಾಗಗಳ ಬಳಕೆಯ ಬಗ್ಗೆಯೂ ಖಾಸಜಿ ವಹಿಸಲಾಗುವುದು.

ಇನ್ನು ಮುಂದೆ ಐಷಾರಾಮಿ ಬಸ್‌ಗಳಲ್ಲೂ 'ಬ್ಲ್ಯಾಕ್ ಬಾಕ್ಸ್'

ಈ ಎಲ್ಲ ಬದಲಾವಣೆಗಳು ಸದ್ಯದಲ್ಲೇ ವೋಲ್ವೋ ಹಾಗೂ ಇನ್ನಿತರ ಐಷಾರಾಮಿ ಬಸ್ಸುಗಳು ಜನಪ್ರಿಯವಾಗಿರುವ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಅತಿ ಶೀಘ್ರದಲ್ಲೇ ಆಳವಡಿಕೆಯಾಗಲಿದೆ.

ಇನ್ನು ಮುಂದೆ ಐಷಾರಾಮಿ ಬಸ್‌ಗಳಲ್ಲೂ 'ಬ್ಲ್ಯಾಕ್ ಬಾಕ್ಸ್'

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ವೋಲ್ವೋ ಬಸ್ ಅಗ್ನಿ ಅನಾಹುತಕ್ಕೀಡಾಗಿತ್ತು. ಈ ದಾರುಣ ದುರಂತದಲ್ಲಿ 45 ಮಂದಿ ಸಜೀವವಾಗಿ ದಹನವಾಗಿದ್ದರು.

More from DriveSpark

Article Published On: Wednesday, March 26, 2014, 10:17 [IST]
English summary
To make high speed luxury bus travel safer authorities have come with a proposal to equip these buses with aircraft style black boxes and seat belts for every seat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+