ಜರ್ಮನಿಯತ್ತ ಪಯಣ ಬೆಳೆಸಿದ ಮೇಡ್ ಇನ್ ಇಂಡಿಯಾ ಇಕೊಸ್ಪೋರ್ಟ್
ಹೌದು, ಭಾರತದಲ್ಲಿ ತಯಾರಿಯಾಗುತ್ತಿರುವ ಇಕೊಸ್ಪೋರ್ಟ್ ಇನ್ನು ಜರ್ಮನಿ ದೇಶದ ರಸ್ತೆಯಲ್ಲೂ ಓಡಾಡಲಿದೆ. ವರದಿಗಳ ಪ್ರಕಾರ ಮೇಡ್ ಇನ್ ಇಂಡಿಯಾ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರುಗಳು ಜರ್ಮನಿ ದೇಶದಲ್ಲಿ ಮಾರಾಟವಾಗಲಿದೆ.
ಕೇವಲ ಜರ್ಮನಿ ಮಾತ್ರವಲ್ಲ. ಇತರ ಯುರೋಪ್ ರಾಷ್ಟ್ರಗಳಿಗೂ ಭಾರತದಿಂದಲೇ ಇಕೊಸ್ಪೋರ್ಟ್ ರಫ್ತುಗೊಳ್ಳಲಿದೆ. 2014 ಜೂನ್ ತಿಂಗಳಿಂದ ಆರಂಭವಾಗಲಿರುವ ರಫ್ತು ಪ್ರಕ್ರಿಯೆಯು ಮುಂದಿನ ದಿನಗಳಲ್ಲಿ ಆಸ್ಟ್ರೀಯಾ, ಸ್ವಿಜರ್ಲೆಂಡ್ ಹಾಗೂ ಬ್ರಿಟನ್ ದೇಶಗಳನ್ನು ಪ್ರವೇಶಿಸಲಿದೆ.

ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು, ಯುರೋಪ್ ಮಾರುಕಟ್ಟೆಗೆ ಅನುಗುಣವಾಗಿ ಕೆಲವೊಂದು ಸೌಲಭ್ಯಗಳನ್ನು ಇಕೊಸ್ಪೋರ್ಟ್‌ನಲ್ಲಿ ಒದಗಿಸಲಿದೆ. ಭಾರತದ ವರ್ಷನ್ ಹೋಲಿಸಿದಾಗ 300ರಷ್ಟು ಹೆಚ್ಚುವರಿ ಭಾಗಗಳು ಸೇರ್ಪಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ.
ಚೆನ್ನೈನ ಘಟಕದಿಂದ ನಿರ್ಮಾಣವಾಗಲಿರುವ ಇಕೊಸ್ಪೋರ್ಟ್ ರಫ್ತಾಗಲಿದೆ. ಇದು ಯುರೋಪ್ ಸೇಫ್ಟಿ ಸ್ಟಾಂಡರ್ಡ್‌ಗೆ ತಕ್ಕಂತೆ ಹೆಚ್ಚಿನ ಸುರಕ್ಷತೆಯನ್ನು ಒಳಗೊಂಡಿರಲಿದೆ. ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟಿಂಗ್ ರೇಟಿಂಗ್‌ನಲ್ಲಿ ನಾಲ್ಕು ಸ್ಟಾರ್ ಗಿಟ್ಟಿಸಿಕೊಂಡಿರುವ ಇಕೊಸ್ಪೋರ್ಟ್, ಹೆಚ್ಚಿನ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ಪರಿಪೂರ್ಣವೆನಿಸಲಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








