ಡೆಸರ್ಟ್ ಸ್ಟ್ರೋಮ್ 2014 ಗೆದ್ದು ಬೀಗಿದ ಎಕ್ಸ್‌ಯುವಿ500
ರಾಜಸ್ತಾನ ಥಾರ್ ಮರುಭೂಮಿ ಸೇರಿದಂತೆ ಸರ್ದಾರ್‌ಶೆಹರ್, ಬಿಕಾನರ್, ಜೈಸಾಲ್‌ಮೆರ್ ಮತ್ತು ಜೈಪುರಗಳಲ್ಲಿ ಆಯೋಜನೆಯಾಗಿದ್ದ 12ನೇ ಆವೃತ್ತಿಯ 2014 ಡೆಸರ್ಟ್ ಸ್ಟ್ರೋಮ್ ಗೆಲ್ಲುವಲ್ಲಿ ಟೀಮ್ ಮಹೀಂದ್ರ ಅಡ್ವೆಂಚರ್ ಸೂಪರ್ ಎಕ್ಸ್‌ಯುವಿ500 ಯಶಸ್ವಿಯಾಗಿದೆ.
ದೇಶದ ಅತ್ಯಂತ ಕಠಿಣ ಎಡ್ಯೂರನ್ಸ್ ರೇಸ್ ಎಂದೇ ಪ್ರಖ್ಯಾತಿ ಪಡೆದಿರುವ ಡೆಸರ್ಟ್ ಸ್ಟ್ರೋಮ್ ರಾಲಿಯಲ್ಲಿ ದೇಶದ್ಯಾಂತದ ಹಲವಾರು ಕಾರು ಹಾಗೂ ಬೈಕ್‌ಗಳು ಭಾಗವಹಿಸಿದ್ದವು. ಅಂತಿಮವಾಗಿ ರಾಜಸ್ತಾನದ ಬಿಸಿಲ ದೆಗೆಯನ್ನು ಲೆಕ್ಕಿಸದೇ 3000ಕ್ಕೂ ಹೆಚ್ಚು ಕೀ.ಮೀ. ಸಂಚರಿಸುವ ಮೂಲಕ ಪ್ರಶಸ್ತಿ ಗೆಲ್ಲುವಲ್ಲಿ ಟೀಮ್ ಮಹೀಂದ್ರ ಅಡ್ವೆಂಚರ್ ಸೂಪರ್ ಎಕ್ಸ್‌ಯುವಿ500 ಯಶಸ್ವಿಯಾಗಿದೆ.

55 ತಂಡಗಳು ಎಕ್ಸ್‌ಟ್ರೀಮ್ (Xtreme), 30 ತಂಡಗಳು ಎನ್‌ಡ್ಯೂರ್ (Ndure) ಮತ್ತು ಇನ್ನು 20 ತಂಡಗಳು ಎಕ್ಸ್‌ಪ್ಲೋರ್ (Xplore) ವಿಭಾಗದಲ್ಲಿ ಭಾಗವಹಿಸಿದ್ದವು. ಈ ಪೈಕಿ ಒಟ್ಟಾರೆಯಾಗಿ ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಗೆಲ್ಲುವಲ್ಲಿ ಟೀಮ್ ಮಹೀಂದ್ರ ಅಡ್ವೆಂಚರ್ ಸೂಪರ್ ಎಕ್ಸ್‌ಯುವಿ500 ಯಶಸ್ಸನ್ನು ಕಂಡಿದೆ.
ಹಲವು ಬಾರಿ ಡೆಸರ್ಟ್ ಸ್ಟೋಮ್ ವಿಜೇತರಾಗಿದ್ದ ಸನ್ನಿ ಸಿಂಧು ಮತ್ತು ಸಹ ಚಾಲಕ ಪಿವಿಎಸ್ ಮೂರ್ತಿ ಮಹೀಂದ್ರ ಎಕ್ಸ್‌ಯುವಿ 500 ಚಾಲಕರಾಗಿದ್ದರು. ಇಲ್ಲಿ ವಿಶೇಷಯೆಂದರೆ ಮೊದಲ ಬಾರಿಗೆ ಈ ಡೀಸೆಲ್ ಗಾಡಿ ಇಷ್ಟೊಂದು ಕಠಿಣ ರೇಸ್ ಗೆಲ್ಲುತ್ತಿರುವುದು.


Click it and Unblock the Notifications








