ದೇಶದಲ್ಲಿ ನಾಕುಷ್; ಮಹೀಂದ್ರ ಎಲೆಕ್ಟ್ರಿಕ್ ಯುರೋಪ್‌ನತ್ತ ಪಯಣ

By Nagaraja

ದೇಶದ ಮುಂಚೂಣಿಯ ಹಾಗೂ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಎಹೀಂದ್ರ ಎಲೆಕ್ಟ್ರಿಕ್, ಈಗ ಯುರೋಪ್ ಮಾರುಕಟ್ಟೆಯತ್ತ ತನ್ನ ಪಯಣ ಬೆಳೆಸುವತ್ತ ದೃಷ್ಟಿ ಹಾಯಿಸಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಮೂಲ ಸೌಕರ್ಯದ ಕೊರತೆಯಿದೆ. ಇನ್ನೊಂದೆಡೆ ಯುರೋಪ್‌ಗಳಂತಹ ಅಭಿವೃದ್ಧಿ ಹೊಂದಿದ ಖಂಡದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ.

mahindra e2o

ಇನ್ನೊಂದೆಡೆ ಭಾರತದಲ್ಲಿ ಕೇಂದ್ರ ಸರಕಾರದಿಂದ ಸಹಾಯವನ್ನು ಬೇಡಿಕೊಳ್ಳಬೇಕಾಗಿದೆ. ಈ ಎಲ್ಲದರ ನಡುವೆ ಯುರೋಪ್ ರಾಷ್ಟ್ರಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ರಫ್ತು ಮಾಡುವುದಕ್ಕೆ ಸಂಬಂಧಿಸಿದಂತೆ ಮಹೀಂದ್ರ ಚಿಂತನೆ ನಡೆಸಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಹೀಂದ್ರ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರಾಗಿರುವ ಪವನ್ ಗೋನ್ಖಾ, ಮಹೀಂದ್ರ ಎಲೆಕ್ಟ್ರಿಕ್ ವಾಹನವು ನಾರ್ವೆ, ಬ್ರಿಟನ್ ಹಾಗೂ ಫ್ರಾನ್ಸ್ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಿರುವ ಮಹೀಂದ್ರದ ಇ2ಒ ಮಾದರಿಗೆ ನಿರೀಕ್ಷಿಸಿದಷ್ಟು ಬೇಡಿಕೆ ವ್ಯಕ್ತವಾಗಿರಲಿಲ್ಲ. ಇದರಿಂದ ಸಂಸ್ಥೆಯು ಅಸಂತೋಷವನ್ನು ಹೊಂದಿದ್ದು, ಮುಂದಿನ ವರ್ಷದಿಂದ ರಫ್ತು ಕಾರ್ಯವನ್ನು ಹಮ್ಮಿಕೊಳ್ಳಲು ಯೋಜನೆ ಇರಿಸಿಕೊಂಡಿದೆ.

ಇದೇ ಸಂದರ್ಭದಲ್ಲಿ ಇನ್ನು ಮುಂದೆಯೂ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದಲ್ಲಿ ಹೆಚ್ಚು ಗಮನ ಕೇಂದ್ರಿಸುವುದಾಗಿ ಸಂಸ್ಥೆಯು ತಿಳಿಸಿದೆ. ಅಲ್ಲದೆ ಸಂಸ್ಥೆಯು ನಿಕಟ ಭವಿಷ್ಯದಲ್ಲೇ ಮ್ಯಾಕ್ಸಿಮೊ ಹಗುರ ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

More from DriveSpark

Article Published On: Saturday, December 6, 2014, 15:20 [IST]
English summary
One of India's largest automobile manufacturer, Mahindra is eyeing the European market for the export of electric vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+