2016ರಲ್ಲಿ ಮಹೀಂದ್ರ ಹ್ಯಾಲೊ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು
ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಎಲೆಕ್ಟ್ರಿಕ್ ವಿಭಾಗವಾಗಿರುವ ಮಹೀಂದ್ರ ರೇವಾ, ಇತ್ತೀಚೆಗಷ್ಟೇ ನವದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ನೂತನ ಹ್ಯಾಲೊ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿತ್ತು.
ಪ್ರಸ್ತುತ ಹ್ಯಾಲೊ ಎಲೆಕ್ಟ್ರಿಕ್ ಕಾರು 2016ನೇ ಸಾಲಿನಲ್ಲಿ ಬ್ರಿಟನ್ ದೇಶಕ್ಕೆ ಪರಿಚಯಿಸುವ ಯೋಜನೆಯನ್ನು ಮಹೀಂದ್ರ ರೇವಾ ಹೊಂದಿದೆ. ಎರಡು ಡೋರ್‌ಗಳ ಮಹೀಂದ್ರ ಹ್ಯಾಲೊ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಮನಸೆಳೆಯುವಂತಹ ವಿನ್ಯಾಸ ಪಡೆದುಕೊಂಡಿದೆ.

ಭವಿಷ್ಯದಲ್ಲಿ ಮಹೀಂದ್ರ ಹ್ಯಾಲೊ ಕ್ರೀಡಾ ಕಾರನ್ನು ಭಾರತಕ್ಕೂ ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದರ ದರ 30ರಿಂದ 35 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.
ಇದರ ಏರೋಡೈನಾಮಿಕ್ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿರಲಿದೆ. ಇದು ಒಂಬತ್ತು ಸೆಕೆಂಡುಗಳಲ್ಲಿ ಗಂಟೆಗೆ 160 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಸಂಸ್ಥೆಯ ಪ್ರಕಾರ ಇದರ ಡಿಲಕ್ಸ್ ವೆರಿಯಂಟ್‌ನಲ್ಲಿ 200 ಕೀ.ಮೀ. ಹಾಗೂ ಸ್ಟಾಂಡರ್ಡ್ ವೆರಿಯಂಟ್‌ನಲ್ಲಿ 150 ಕೀ.ಮೀ. ರೇಂಜ್ ವರೆಗೂ ಚಲಿಸಬಹುದಾಗಿದೆ.


Click it and Unblock the Notifications








