ಮುಂದಿನ ತಲೆಮಾರಿನ ಸ್ಕಾರ್ಪಿಯೊ ಸೆ. 25ರಂದು ಬಿಡುಗಡೆ
ಅಂತೂ ದೇಶದ ಬಹುನಿರೀಕ್ಷಿತ ಲಾಂಚ್‌ಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿರುವ ಮುಂದಿನ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಬಿಡುಗಡೆಗೆ ದಿನಾಂಕ ನಿಗದಿಗೊಂಡಿದೆ.
ದೇಶದ ಅತಿ ದೊಡ್ಡ ಉಪಯುಕ್ತ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಇದನ್ನು ಖಚಿತಪಡಿಸಿದ್ದು, ಮುಂದಿನ ಜನಾಂಗದ ಸ್ಕಾರ್ಪಿಯೊ 2014 ಸೆಪ್ಟೆಂಬರ್ 25, ಗುರುವಾರದಂದು ಬಿಡುಗಡೆಯಾಗಲಿದೆ.

ಹಿಂದಿನ ಮಾದರಿಗೆ ಹೋಲಿಸಿದಾಗ ಹೊಸ ಸ್ಕಾರ್ಪಿಯೊದಲ್ಲಿ ವಿನ್ಯಾಸದಿಂದ ಹಿಡಿದು ವೈಶಿಷ್ಟ್ಯಗಳ ವರೆಗೆ ಗಮನಾರ್ಹ ಬದಲಾವಣೆ ಕಂಡುಬರಲಿದೆ. ಈ ಹಿಂದೆ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿ ಬಿದ್ದಿರುವ ಸ್ಕಾರ್ಪಿಯೊ ಕಳೆದ ಕೆಲವು ತಿಂಗಳಿಂದ ಮುಂಬೈ ಹಾಗೂ ಪುಣೆಯಲ್ಲಿ ಕಾಣಿಸಿಕೊಂಡಿದೆ.
ಸ್ಕಾರ್ಪಿಯೊ ದೇಶದ ಅತ್ಯಂತ ಯಶಸ್ವಿ ಎಸ್‌ಯುವಿ ಮಾದರಿಗಳಲ್ಲಿ ಒಂದಾಗಿದ್ದು, ಈ ಹಿನ್ನಲೆಯಲ್ಲಿ ಹೊಸ ಮಾದರಿಯನ್ನು ಗ್ರಾಹಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಅಲ್ಲದೆ ಈಗಾಗಲೇ ಆನ್‌ಲೈನ್ ಶಾಂಪಿಂಗ್ ಕೇಂದ್ರ ಸ್ನಾಪ್‌ಡೀಲ್‌ನಲ್ಲಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಇದಕ್ಕಾಗಿ ಮುಂಗಡವಾಗಿ 20,000 ರು. ಪಾವತಿಸಬೇಕಾಗಿದೆ. ಹೊಸ ಸ್ಕಾರ್ಪಿಯೊದಲ್ಲಿ ಎಸ್2, ಎಸ್4, ಎಸ್6, ಎಸ್8 ಮತ್ತು ಎಸ್10 ಎಂಜಿನ್ ವೆರಿಯಂಟ್‌ಗಳಿರುವ ಸಾಧ್ಯತೆಯಿದೆ. ಇದು ಹೊಸ ಬಣ್ಣಗಳನ್ನು ಹೊಂದಿರಲಿದೆ.


Click it and Unblock the Notifications