ಆಲ್ಟೊ ಕೆ10 ಎಎಂಟಿ ಮಾದರಿಗೆ ಭಾರಿ ಬೇಡಿಕೆ
ಇದೀಗಷ್ಟೇ ಬಿಡುಗಡೆಗೊಂಡಿರುವ ಹೊಸ ಪೀಳಿಗೆಯ ಮಾರುತಿ ಸುಜುಕಿ ಆಲ್ಟೊ ಕೆ10 ಕಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಪೈಕಿ ಆಲ್ಟೊ ಕೆ10 ಎಎಂಟಿ ಮಾದರಿಯ ಕಾಯುವಿಕೆ ಅವಧಿ ಎರಡು ತಿಂಗಳುಗಳಷ್ಟು ವಿಸ್ತಾರವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಸೆಲೆರಿಯೊ ಎಎಂಟಿ ಮಾದರಿಗೂ ಭಾರಿ ಬೇಡಿಕೆ ವ್ಯಕ್ತವಾಗಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು. ವಿಶೇಷವೆಂದರೆ ಎಂಟ್ರಿ ಲೆವೆಲ್ ಆಲ್ಟೊ ಕೆ10 ಕಾರಿನಲ್ಲೂ ಎಎಂಟಿ ಆಯ್ಕೆ ನೀಡುವ ಮೂಲಕ ಸಂಸ್ಥೆಯು ಗ್ರಾಹಕರಿಗೆ ಬಂಪರ್ ನೀಡಿತ್ತು.

ವರದಿಗಳ ಪ್ರಕಾರ ಮಾರುತಿ ಆಲ್ಟೊ ಕೆ10 ಎಎಂಟಿ ವರ್ಷನ್ ಕಾಯುವಿಕೆ ಅವಧಿ ಎರಡು ತಿಂಗಳ ವರೆಗೂ ವಿಸ್ತರಿಸಿದೆ. ಇನ್ನೊಂದೆಡೆ ಮ್ಯಾನುವಲ್ ವರ್ಷನ್ ಒಂದು ವಾರದೊಳಗೆ ಗ್ರಾಹಕರ ಕೈ ಸೇರುತ್ತಿದೆ.
2014 ನೆವೆಂಬರ್ 3ರಂದು ಬಿಡುಗಡೆಯಾಗಿದ್ದ ಮಾರುತಿ ಆಲ್ಟೊ ಕೆ10 ಮಾದರಿಯು ಹ್ಯುಂಡೈ ಇಯಾ್ 1.0 ಮತ್ತು ದಟ್ಸನ್ ಗೊ ಮಾದರಿಗಳಿಗೆ ಸ್ಪರ್ಧೆ ಒಡ್ಡುತ್ತಿದೆ. ಇದು ಎಲ್‌ಎಕ್ಸ್, ಎಲ್‌ಎಕ್ಸ್‌ಐ, ವಿಎಕ್ಸ್‌ಐ, ವಿಎಕ್ಸ್‌ಐ (ಒ), ವಿಎಕ್ಸ್‌ಐ (ಎಎಂಟಿ) ಮತ್ತು ವಿಎಕ್ಸ್‌ಐ (ಸಿಎನ್‌ಜಿ) ಗಳೆಂಬ ಆರು ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ. ಅಂತೆಯೇ 1.0 ಲೀಟರ್ ತ್ರಿ ಸಿಲಿಂಡರ್ ಕೆ ಸಿರೀಸ್ ಎಂಜಿನ್ ಆಳವಡಿಸಲಾಗಿದೆ.
ಇನ್ನು ಸೌಲಭ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಜೋಡಿಸಲಾದ ಮ್ಯೂಸಿಕ್ ಸಿಸ್ಟಂ, ಆಕ್ಸ್ ಇನ್, ಯುಎಸ್‌ಬಿ ಪೋರ್ಟ್, ಒಳಭಾಗದಿಂದಲೇ ಹೊಂದಾಣಿಸಬಹುದಾದ ಔಟ್‌ಸೈಡ್ ರಿಯರ್ ವ್ಯೂ ಮಿರರ್, ಫ್ರಂಟ್ ಪವರ್ ವಿಂಡೋ, ಬೋಟಲ್ ಹೋಲ್ಡರ್, ಅಪ್ಪರ್ ಟ್ರೇ, ಡ್ಯುಯಲ್ ಕಪ್ ಹೋಲ್ಡರ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ಗಳನ್ನು ಪಡೆದುಕೊಂಡಿದೆ. ಇದು 3.06 ಲಕ್ಷ ರು.ಗಳಿಂದ 3.81 ಲಕ್ಷ ರು.ಗಳ (ಎಕ್ಸ್ ಶೋ ರೂಂ ದೆಹಲಿ) ವರೆಗೆ ದುಬಾರಿಯೆನಿಸಿದೆ.
ಮೆಟ್ಜೆಲೆರ್ ರೋಡ್‌ಟೆಕ್ ಝಡ್6 ಟ್ಯೂಬ್‌ಲೆಸ್ - ಶೇ.10ರಷ್ಟು ರಿಯಾಯಿತಿ


Click it and Unblock the Notifications








