ಬ್ರಾಂಡ್ ಇಮೇಜ್ ವೃದ್ಧಿಸಲು ಮಾರುತಿ 'ಬ್ರಾಂಡ್ ಸೆಂಟರ್'

By Nagaraja

ಸಣ್ಣ ಬಜೆಟ್ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿರುವ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇದೀಗ ತನ್ನ ಬ್ರಾಂಡ್ ಇಮೇಜ್ ಇನ್ನಷ್ಟು ವರ್ಧಿಸುವ ಸಲುವಾಗಿ ನೂತನ 'ಬ್ರಾಂಡ್ ಸೆಂಟರ್' ಅನ್ನು ದೇಶದ್ಯಾಂತ ತೆರೆದುಕೊಳ್ಳಲಿದೆ.

ನಿಕಟ ಪ್ರತಿಸ್ಪರ್ಧಿಗಳಿಂದ ಎದುರಾಗುತ್ತಿರುವ ಪೈಪೋಟಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ಮಾರುತಿ ಇಂತಹದೊಂದು ಕ್ರಮಕ್ಕೆ ಮುಂದಾಗಿದೆ. ಎಸ್‌ಯುವಿ ಹಾಗೂ ಎಂಪಿವಿ ವಿಭಾಗದಲ್ಲಿ ಏರುತ್ತಿರುವ ಪೈಪೋಟಿಯನ್ನು ಮಾರುತಿ ಕಡೆಗಣಿಸುವಂತಿಲ್ಲ.


ಈ ನಿಟ್ಟಿನಲ್ಲಿ ತಂತ್ರಾಂಶದಲ್ಲಿ ಹೆಚ್ಚು ಮುಂದುವರಿದ ಎಂಪಿವಿ ಹಾಗೂ ಎಸ್‌ಯುವಿ ವಿಭಾಗದತ್ತಲೂ ಗಮನ ಕೇಂದ್ರಿಕರಿಸುವುದು ಅತ್ಯಗತ್ಯವಾಗಿದೆ. ಇದೇ ಕಾರಣಕ್ಕಾಗಿ ದೇಶದ 16 ವಿವಿಧ ನಗರಗಳಲ್ಲಿ ಬ್ರಾಂಡ್ ಸೆಂಟರುಗಳನ್ನು ಆರಂಭಿಸಲಿದೆ. ಇದರಲ್ಲಿ ಬೆಂಗಳೂರು ಸೇರಿದಂತೆ ಕೋಲ್ಕತ್ತಾ, ಚೆನ್ನೈ, ಚಂಡೀಗಡ, ಕೊಚ್ಚಿ, ಜೈಪುರ, ಇಂಧೋರ್ ಹಾಗೂ ಮತ್ತಿತ್ತರ ನಗರಗಳು ಸೇರಿಕೊಂಡಿರಲಿದೆ.

ಮಾರುತಿಯ ಹೊಸತಾದ ಬ್ರಾಂಡ್ ಸೆಂಟರ್‌ನಲ್ಲಿ ಗ್ರಾಹಕರಿಗೆ ಮಾರುತಿಯಿಂದ ಆಗಮನವಾಗಲಿರುವ ನೂತನ ಉತ್ಪನ್ನ, ಆಧುನಿಕ ತಂತ್ರಗಾರಿಕೆಯ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಗಲಿದೆ. ಶಾಪಿಂಗ್ ಮಾಲ್‌ಗಳಂತಹ ಜನನಿಬಿಡ ಕೇಂದ್ರ ಪ್ರದೇಶಗಳಲ್ಲಿ ಇದು ಸ್ಥಿತಗೊಳ್ಳಲಿದೆ. ಅಷ್ಟೇ ಅಲ್ಲದೆ ಈ ಬ್ರಾಂಡ್ ಸೆಂಟರ್‌ಗಳಲ್ಲಿ ಮಾರುತಿಯ ಮುಂಬರುವ ಮಾದರಿಗಳು ಪ್ರದರ್ಶನವಾಗಲಿದೆ.

s cross

ಹಾಗಿದ್ದರೂ ಇದು ಮಾರಾಟ ಹಾಗೂ ಸರ್ವೀಸ್ ಕೇಂದ್ರಗಳ ಪಾತ್ರವಹಿಸುವುದಿಲ್ಲ. ಬದಲಾಗಿ ಮಾರುತಿ ಮುಂಬರುವ ಕಾರುಗಳು ಹಾಗೂ ಟೆಕ್ನಾಲಜಿ ಬಗ್ಗೆ ಮಾಹಿತಿ ನೀಡಲಿದೆ. ಪ್ರಸ್ತುತ ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಮಾರುತಿ ಸಿಯಾಜ್ ಪ್ರೀಮಿಯಂ ಸೆಡಾನ್, ಎಕ್ಸ್‌4 ಎಸ್-ಕ್ರಾಸ್ ಕಾಂಪಾಕ್ಟ್ ಎಸ್‌ಯುವಿ ಮತ್ತು ಸುಜುಕಿ ಐವಿ-4 ಎಸ್‌ಯುವಿ ಮಾದರಿಗಳನ್ನು ಪ್ರದರ್ಶಿಸುವ ಸಾಧ್ಯತೆಯಿದೆ. ಇದು ನೂತನ ಕಾರು ಖರೀದಿಸಲು ಬಯಸುವ ಗ್ರಾಹಕರನ್ನು ಆಕರ್ಷಿಸಲು ಮಾರುತಿಗೆ ನೆರವಾಗಲಿದೆ.

Article Published On: Monday, March 10, 2014, 14:11 [IST]
English summary
Maruti Suzuki's bread and butter are small entry budget cars but even India's largest carmaker cannot ignore the maturing automotive scene in the country which now increasingly leans towards larger, more expensive vehicles such as SUVs and MPVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+