ಸೆಲೆರಿಯೊ ಆಟೋಮ್ಯಾಟಿಕ್ ವರ್ಷನ್ ಸಕತ್ ಫೇಮಸ್ಸು

By Nagaraja

ನಿಮಗೆಲ್ಲರಿಗೂ ತಿಳಿದಂತೆಯೇ ಬಹುನಿರೀಕ್ಷಿತ ಮಾರುತಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಲಾಂಚ್ ಕಂಡಿತ್ತು. ಎಸ್ಟಾರ್ ಹಾಗೂ ಎಸ್ಟಿಲೊ ಬದಲಿ ಕಾರಾಗಿ ಗುರುತಿಸಿಕೊಂಡಿರುವ ಸೆಲೆರಿಯೊ ಬಿಡುಗಡೆಯಾದ ಕೆಲವೇ ದಿನಗಳಲ್ಲೇ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಬಿಸಿ ಬಿಸಿ ದೋಸೆಯಂತೆ ಬುಕ್ಕಿಂಗ್ ದಾಖಲಿಸಿಕೊಳ್ಳುತ್ತಿರುವ ಸೆಲೆರಿಯೊ ದಿನಂಪ್ರತಿ 1,000ದಷ್ಟು ಮುಂಗಡ ನೊಂದಾವಣಿ ಗಿಟ್ಟಿಸಿಕೊಳ್ಳುತ್ತಿದೆ. ಈ ಪೈಕಿ ಸಾಮಾನ್ಯ ಮ್ಯಾನುವಲ್ ವರ್ಷನ್‌ಗೆ ಹೋಲಿಸಿದರೆ ಆಟೋಮ್ಯಾಟಿಕ್ ಸೆಲೆರಿಯೊಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ ಎಂದು ವರದಿಗಳು ತಿಳಿಸಿದೆ.

Maruti Celerio

ಮಾರುತಿ ಸೆಲೆರಿಯೊದ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ದಿನಂಪ್ರತಿ ದಾಖಲಾಗುತ್ತಿರುವ ಒಟ್ಟು 1,000ದಷ್ಟು ಬುಕ್ಕಿಂಗ್‌ಗಳ ಪೈಕಿ 500ಗಿಂತಲೂ ಹೆಚ್ಚು ಎಎಂಟಿ ವೆರಿಯಂಟ್‌ಗಳಾಗಿವೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಇದೇ ಮೊದಲ ಬಾರಿಗೆ ದೇಶೀಯ ವಾಹನೋದ್ಯಮದಲ್ಲಿ ಆಟೋಮ್ಯಾಟಿಕ್‌ ವರ್ಷನ್‌ಗೆ ಮ್ಯಾನುವಲ್‌ಗಿಂತಲೂ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಈ ಅಲ್ಪಾವಧಿಯಲ್ಲಿ ಸೆಲೆರಿಯೊ ಇಷ್ಟೊಂದು ಫೇಮಸ್ಸು ಆಗಲಿದೆ ಎಂಬುದನ್ನು ಸ್ವತ: ಮಾರುತಿ ಕೂಡಾ ನಿರೀಕ್ಷಿಸಿರಲಿಲ್ಲವಂತೆ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ಮುಖ್ಯಸ್ಥ ಆರ್‌ಸಿ ಭಾರ್ಗವ, ಸೆರಿರಿಯೊ ಒಟ್ಟು ಬುಕ್ಕಿಂಗ್‌ನ ಶೇಕಡಾ 51ರಷ್ಟು ಆಟೋಮ್ಯಾಟಿಕ್ ವರ್ಷನ್‌ಗಳಾಗಿವೆ. ಪ್ರಸ್ತುತ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ವೇಟಿಂಗ್ ಪಿರೇಡ್ ಚಾಲ್ತಿಯಲ್ಲಿರುತ್ತದೆ. ಆದರೆ ಒಂದು ವರ್ಷದ ಬಳಿಕ ಉತ್ಪಾದನೆಯನ್ನು ಸಂಪೂರ್ಣ ಸ್ಥಳೀಯಗೊಳಿಸಲಿದ್ದೇವೆ ಎಂದಿದ್ದಾರೆ.

ಅಷ್ಟಕ್ಕೂ ಮ್ಯಾನುವಲ್ ವರ್ಷನ್ ನೀಡುವುದಕ್ಕೆ ಸಮಾನವಾದ ಮೈಲೇಜ್ ನೀಡುವಲ್ಲಿ ಆಟೋಮ್ಯಾಟಿಕ್ ವರ್ಷನ್ ಯಶಸ್ವಿಯಾಗಿರುವುದೇ ಇದರ ಹಿಂದಿರುವ ರಹಸ್ಯವಾಗಿದೆ. ಹಾಗೆಯೇ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗುತ್ತಿರುವುದು ಸಹ ಮಾರುತಿಗೆ ನೆರವಾಗಲಿದೆ.

More from DriveSpark

Article Published On: Tuesday, February 25, 2014, 15:12 [IST]
English summary
Fifty one. That's the percentage of Maruti Celerio automatic cars that have been booked compared to its manual variant. Maruti Celerio, launched on February 6, 2014 has been receiving some 1000 odd bookings everyday and over 500 of them are automated manual transmission (AMT) variants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+