ಸೆಲೆರಿಯೊ ಕಾಯುವಿಕೆ ಅವಧಿ ಆರು ತಿಂಗಳಿಗೆ ವಿಸ್ತರಣೆ

By Nagaraja

ಸಮಕಾಲೀನ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಕಾರಾಗಿರುವ ಮಾರುತಿ ಸುಜುಕಿ ಸೆಲೆರಿಯೊ, ಕಾಯುವಿಕೆ ಅವಧಿ ಆರು ತಿಂಗಳಿಗೆ ವಿಸ್ತರಣೆಯಾಗಿದೆ. ನಿರೀಕ್ಷೆಯಂತೆಯೇ 2014 ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಿದ್ದ ಸೆಲೆರಿಯೊ ಹ್ಯಾಚ್‌ಬ್ಯಾಕ್ ಆವೃತ್ತಿಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಅಲ್ಲದೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 30,000ಕ್ಕಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದೀಗ ಬಂದಿರುವ ಮಾಹಿತಿ ಪ್ರಕಾರ ಸೆಲೆರಿಯೊ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಹೊಂದಿರುವ ಕಾರನ್ನು ಬುಕ್ ಮಾಡಿದ ಗ್ರಾಹಕರು, ತಮ್ಮ ಕನಸಿನ ಕಾರನ್ನು ಪಡೆಯಲು ಆರು ತಿಂಗಳಷ್ಟು ಕಾಲ ಕಾಯಬೇಕಾಗಿದೆ. ನೂತನ ಆಟೋಮ್ಯಾಟಿಕ್ ವೆರಿಯಂಟ್ ಸೆಲೆರಿಯೊಗೆ ಕಾರು ಬೇಡಿಕೆ ಕುಸಿತದ ನಡುವೆಯೂ ಇಷ್ಟೊಂದು ಅಭೂತಪೂರ್ವ ಪ್ರತಿಕ್ರಿಯೆ ಲಭಿಸಲು ಕಾರಣವಾಗಿದೆ.


ಭಾರತದ ವಾಹನೋದ್ಯಮ ಇತಿಹಾಸದಲ್ಲೇ ಅತ್ಯುತ್ತಮ ಮಾರಾಟದ ಆಟೋಮ್ಯಾಟಿಕ್ ಕಾರೆಂಬ ಮನ್ನಣೆಗೆ ಪಾತ್ರವಾಗಿರುವ ಸೆಲೆರಿಯೊ, ಸಾಮಾನ್ಯ ಮ್ಯಾನುವಲ್ ವೆರಿಯಂಟ್‌ಗಿಂತಲೂ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನೊಂದೆಡೆ ಮ್ಯಾನುವಲ್ ವೆರಿಯಂಟ್‌ಗಾಗಿ ಗ್ರಾಹಕರು ಮೂರು ತಿಂಗಳುಗಷ್ಟು ಕಾಯಬೇಕಾಗಿದೆ. ಐದು ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಿರುವ ಸೆಲೆರಿಯೊದ ಝಡ್‌ಎಕ್ಸ್‌ಐ ವೆರಿಯಂಟ್, ಎಬಿಎಸ್, ಫ್ರಂಟ್ ಏರ್ ಬ್ಯಾಗ್, ಸೆಂಟ್ರಲ್ ಲಾಕಿಂಗ್, ಸ್ಟೀರಿಂಗ್ ವೀಲ್ ಮೌಂಟೆಡ್ ಆಡಿಯೋ ಕಂಟ್ರೋಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಲ್ಲ ಹೊರಗಿನ ರಿಯರ್ ವ್ಯೂ ಮಿರರ್, ರಿಯರ್ ವಿಂಡೋ ವೈಪರ್‌ಗಳಂತಹ ಆಕರ್ಷಕ ಫೀಚರುಗಳನ್ನು ಒಳಗೊಂಡಿದೆ.

ಅಂದ ಹಾಗೆ ನೂತನ ಸೆಲೆರಿಯೊ, 1.0 ಲೀಟರ್ ಕೆ-ನೆಕ್ಸ್ಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 69 ಪಿಎಸ್ ಪವರ್ (90 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಭಾರತ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ಪ್ರತಿ ಲೀಟರ್‌ಗೆ 23.1 ಕೀ.ಮೀ. ಮೈಲೇಜ್ ನೀಡಲಿದೆ.

Maruti Celerio

More from DriveSpark

Article Published On: Tuesday, March 18, 2014, 13:57 [IST]
English summary
Maruti has done it again with the Celerio. At a time when car sales are declining and discounts are being offered on most models, including on those sold by Maruti Suzuki itself, the company has come out with the Celerio that's defying all odds, selling better than anyone expected.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+