ವಾರ್ಷಿಕ ಮೂರು ದಶಲಕ್ಷ ಮಾರಾಟ ಗುರಿ ಹೊಂದಿರುವ ಮಾರುತಿ

By Nagaraja

ದೇಶದ ಅಗ್ರ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ವ್ಯಾಪಾರವನ್ನು ಇನ್ನಷ್ಟು ಕುದುರಿಸಿಕೊಳ್ಳುವ ಯೋಜನೆಯಲ್ಲಿದ್ದು ವಾರ್ಷಿಕವಾಗಿ ಮೂರು ದಶಲಕ್ಷಗಳಷ್ಟು ಯುನಿಟ್ ಮಾರಾಟ ಗುರಿಯನ್ನು ಹೊಂದಿದೆ.

ಮಾರುತಿ ತನ್ನ ಗುರಿಯನ್ನು ತಲುಪಲು ಈಗ ಚಾಲ್ತಿಯಲ್ಲಿರುವ ತನ್ನ ಮಾರಾಟ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ಮುಖ್ಯಸ್ಥ ಆರ್‌ಸಿ ಭಾರ್ಗವ, ವಾರ್ಷಿಕವಾಗಿ ತಮ್ಮ ಈ ಗುರಿ ಮುಟ್ಟಲು ಕನಿಷ್ಠ 25 ಮಾದರಿಗಳನ್ನು ಹೊಂದಿರಬೇಕಾಗಿದೆ ಎಂದಿದ್ದಾರೆ.

maruti ciaz

ಮಾರುತಿ ಸದ್ಯದಲ್ಲೇ ಕ್ರೀಡಾ ಬಳಕೆಯ ವಾಹನವೊಂದನ್ನು (ಎಸ್‌ಯುವಿ) ಬಿಡುಗಡೆ ಮಾಡಲಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳೊಂದಿಗೆ ಸಿಎನ್‌ಜಿ ವೆರಿಯಂಟ್‌ಗಳೊಂದಿಗೂ ಬಿಡುಗಡೆಯಾಗಲಿದೆ. ಇದು ಪ್ರಮುಖವಾಗಿಯೂ ರೆನೊ ಡಸ್ಟರ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಇಲ್ಲಿಗೆ ಮಾರುತಿ ಯೋಜನೆ ಕೊನೆಗೊಳ್ಳುವುದಿಲ್ಲ. ಇದಾದ ಬೆನ್ನಲ್ಲೇ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿ ಮಾದರಿಯನ್ನು ಮಾರುತಿ ಲಾಂಚ್ ಮಾಡಲಿದೆ. ಈ ಮೂಲಕ ಸಣ್ಣ ಕಾರಿನಿಂದ ಪ್ರೀಮಿಯಂ ವಿಭಾಗದತ್ತವೂ ದಾಪುಗಾಲನ್ನಿಡಲಿರುವ ಮಾರುತಿ ಎಲ್ಲ ಸೆಗ್ಮೆಂಟ್‌ಗಳಲ್ಲೂ ತನ್ನ ಅಗ್ರ ಮಾದರಿಯನ್ನು ಖಾತ್ರಿಪಡಿಸಲಿದೆ.

ಇದೇ ಹೊತ್ತಿಗೆ ಹಗುರ ವಾಣಿಜ್ಯ ವಾಹನದ (ಎಲ್‌ಸಿವಿ) ಬಿಡುಗಡೆ ಯೋಜನೆಯನ್ನು ಮಾರುತಿ ಹೊಂದಿದೆ. ಇದು ಒಂದು ಟನ್ ಭಾರವನ್ನು ಸಾಗಿಸು ಸಾಮರ್ಥ್ಯ ಹೊಂದಿರಲಿದ್ದು, ಟಾಟಾ ಏಸ್, ಮಹೀಂದ್ರ ಗಿಯೊ ಮತ್ತು ಅಶೋಕ್ ಲೇಲ್ಯಾಂಡ್ ದೋಸ್ತ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಅಂದ ಹಾಗೆ ಗುಜರಾತ್‌ನಲ್ಲಿ ಹೊಸ ಘಟಕ ಆರಂಭಿಸುವ ಯೋಜನೆ ಹೊಂದಿರುವ ಸಂಸ್ಥೆಯು ವಾರ್ಷಿಕವಾಗಿ 1.5 ದಶಲಕ್ಷ ಯುನಿಟ್ ನಿರ್ಮಾಣ ಸಾಮರ್ಥ್ಯದ ಗುರಿ ಹೊಂದಿದೆ.

Article Published On: Wednesday, September 3, 2014, 12:25 [IST]
English summary
India's largest car maker, Maruti Suzuki is set to storm the market with plans of selling 3 million cars annually. In regards to achieving their target, Maruti will have to almost double their model line up to 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+