25 ಲಕ್ಷ ದಾಟಿದ ಮಾರುತಿ ಕೆ-ಸಿರೀಸ್ ಎಂಜಿನ್ ಮಾರಾಟ

Written By:

ದೇಶದ ಅತಿ ದೊಡ್ಡ ವಾಹನ ಮಾರುಕಟ್ಟೆ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಕೆ ಸಿರೀಸ್ ಉತ್ಪಾದನೆಯು 25 ಲಕ್ಷ ಯುನಿಟ್‌ಗಳ ಮೈಲುಗಲ್ಲನ್ನು ತಲುಪಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.

2008ನೇ ಇಸವಿಯಲ್ಲಿ ಎ ಸ್ಟಾರ್ ಆವೃತ್ತಿಯಲ್ಲಿ ಪರಿಚಯವಾಗಿದ್ದ ಕೆ ಸಿರೀಸ್ ಎಂಜಿನ್ ಬಳಿಕ ಜನಪ್ರಿಯ ಆಲ್ಟೊ ಕೆ10, ಸೆಲೆರಿಯೊ, ವ್ಯಾಗನಾರ್ ಮತ್ತು ಸ್ವಿಫ್ಟ್‌ಗಳಂತಹ ಮಾದರಿಗಳಲ್ಲಿ ಆಳವಡಿಕೆಯಾಗಿತ್ತು.

To Follow DriveSpark On Facebook, Click The Like Button
maruti suzuki

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಾರುತಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಸಿವಿ ರಾಮ್, ಕೆ-ಸಿರೀಸ್ ದೇಶದ ಅತ್ಯಂತ ಹೆಚ್ಚು ಇಂಧನ ಕ್ಷಮತೆಯುಳ್ಳ ಎಂಜಿನ್ ಆಗಿದೆ ಎಂದಿದ್ದಾರೆ.

ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಇಂಧನ ಕ್ಷಮತೆ ನೀಡುವ ಹಾಗೂ ಎಮಿಷನ್ ಮಟ್ಟ ಕಡಿತಗೊಳಿಸುವ ನಿಟ್ಟಿನಲ್ಲಿ ಎಂಜಿನ್ ಪರಿಷ್ಕೃತಲಾಗುವುದು ಎಂದಿದ್ದಾರೆ.

ಇನ್ನು ಜುಲೈ ಮಾರಾಟವನ್ನು ಗಮನಿಸಿದರೆ ಮಾರುತಿ ಕಳೆದ ವರ್ಷಗಳಿಗಿಂತಲೂ ಶೇಕಡಾ 14.7 ಏರುಗತಿ ದಾಖಲಿಸಿತ್ತಲ್ಲದೆ ಒಟ್ಟು 4,01,274 ಮಾರಾಟ ಕಂಡುಕೊಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 349733 ಯುನಿಟ್ ಮಾರಾಟ ದಾಖಲಿಸಿತ್ತು.

English summary
India's largest car manufacturer Maruti has made an official announcement saying that production of their K-series engine has crossed the 25 lakh units mark today.
Story first published: Saturday, August 16, 2014, 10:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark