ಆಟೋಮ್ಯಾಟಿಕ್ ಕಾರುಗಳ ಹೊಸ ಕ್ರಾಂತಿ - ಸೆಲೆರಿಯೊ
ನೈಜ ಚಾಲನಾ ಅನುಭವ ಭಾಸುವಾಗುತ್ತಿಲ್ಲವೆಂಬ ಏಕೈಕ ಕಾರಣದಿಂದಾಗಿ ಅನೇಕರು ಆಟೋಮ್ಯಾಟಿಕ್ ಕಾರುಗಳನ್ನು ಡ್ರೈವಿಂಗ್ ಮಾಡಲು ಇಷ್ಟಪಡುವುದಿಲ್ಲ. ಕಡಿಮೆ ಇಂಧನ ಕ್ಷಮತೆಯು ಸಹ ಇದರ ಹಿಂದಿರುವ ಮಗದೊಂದು ಕಾರಣವಾಗಿದೆ.
ಅದು ಏನೇ ಆಗಿರಲಿ. ನಗರದ ಪ್ರದೇಶದ ವಾಹನ ದಟ್ಟಣೆಯಲ್ಲಂತೂ ಬಹುತೇಕರು ಆಟೋಮ್ಯಾಟಿಕ್ ಕಾರುಗಳನ್ನೇ ಇಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ಇದೀಗ ಆಗಮನವಾಗಿರುವ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ಹೊಸ ಕ್ರಾಂತಿಯ ಅಲೆಯೆಬ್ಬಿಸುವ ನಿರೀಕ್ಷೆಯಲ್ಲಿದೆ.

ಎ-ಸ್ಟಾರ್ ಹಾಗೂ ಎಸ್ಟಿಲೊ ಬದಲಿ ಕಾರಾಗಿ ರಸ್ತೆ ಪ್ರವೇಶಿಸಿರುವ ಸೆಲೆರಿಯೊ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ. ಸ್ಮರ್ಧಾತ್ಮಕ ದರಗಳಲ್ಲಿ ಎಂಟ್ರಿ ಕೊಟ್ಟಿರುವ ಸೆಲೆರಿಯೊ ಅತ್ಯಧಿಕ ಇಂಧನ ಕ್ಷಮತೆಯನ್ನು ನೀಡುವಲ್ಲಿಯೂ ಸಕ್ಷಮವಾಗಲಿದೆ ಎಂದು ವರದಿಗಳು ತಿಳಿಸಿವೆ.
ಮಹೀಂದ್ರ ಹಾಗೂ ಟಾಟಾಗಳಂತಹ ದೇಶದ ಇತರ ವಾಹನ ಸಂಸ್ಥೆಗಳು ಸಹ ಆಟೋಮ್ಯಾಟಿಕ್ ಕಾರುಗಳನ್ನು ಉತ್ಪಾದಿಸಲು ಉತ್ಸುಕತೆ ವ್ಯಕ್ತಪಡಿಸಿದೆ. ಈ ಪೈಕಿ ಕ್ವಾಂಟೊದಲ್ಲಿ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಳವಡಿಸಲಾಗುವುದು. ಹಾಗೆಯೇ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರಲ್ಲೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಳವಡಿಕೆಯಾಗಲಿದೆ.
ಅಷ್ಟೇ ಯಾಕೆ ನಿಕಟ ಭವಿಷ್ಯದಲ್ಲೇ ವಿಶ್ವದ ಅಗ್ಗದ ನ್ಯಾನೋ ಕಾರಲ್ಲೂ ಆಟೋಮ್ಯಾಟಿಕ್ ತಂತ್ರಾಂಶ ಆಳವಡಿಸುವ ಯೋಜನೆಯನ್ನು ಟಾಟಾ ಹೊಂದಿದೆ. ಹಾಗೊಂದು ವೇಳೆ ಇದು ನನಸಾದ್ದಲ್ಲಿ ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರೆಂಬ ಕೀರ್ತಿಗೆ ನ್ಯಾನೋ ಪಾತ್ರವಾಗಲಿದೆ.


Click it and Unblock the Notifications








