ಅತಿ ಶೀಘ್ರದಲ್ಲೇ ಮಾರುತಿ ಸೆಲೆರಿಯೊ ಸಿಎನ್‌ಜಿ ಎಂಟ್ರಿ
ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವೆರಿಯಂಟ್ ಅತಿ ಶೀಘ್ರದಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಮಕಾಲೀನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ಸೆಲೆರಿಯೊ, ಸಿಎನ್‌ಜಿ ವೆರಿಯಂಟ್ ಮೂಲಕ ಇನ್ನಷ್ಟು ಹೆಚ್ಚು ಮಾರಾಟ ಬೇಡಿಕೆ ನಿರೀಕ್ಷೆಯನ್ನಿಟ್ಟುಕೊಂಡಿದೆ.
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಸೆಲೆರಿಯೊ, ಭರ್ಜರಿ ಲಾಂಚ್ ಕಂಡಿತ್ತು. ಅಲ್ಲದೆ ಇದರ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ (ಎಎಂಟಿ) ಭಾರಿ ಸಂಖ್ಯೆ ಬೇಡಿಕೆ ಕಂಡುಬಂದಿತು.

ವರದಿಗಳ ಪ್ರಕಾರ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ಪ್ರತಿ ತಿಂಗಳಲ್ಲಿ 1,000ದಷ್ಟು ಎಎಂಟಿಗೆ ಬುಕ್ಕಿಂಗ್ ಗಿಟ್ಟಿಸಿಕೊಳ್ಳುತ್ತಿದೆ. ಇದೀಗ ಆಗಮನವಾಗಲಿರುವ ಸಿಎನ್‌ಜಿ ವೆರಿಯಂಟ್‌ನಲ್ಲಿ ಆಟೋಮ್ಯಾಟಿಕ್ ತಂತ್ರಜ್ಞಾನ ಇರುವುದಿಲ್ಲ. ಬದಲಾಗಿ ಸಾಮಾನ್ಯ ಮಾನ್ಯುವಲ್ ಗೇರ್ ಬಾಕ್ಸ್ ಆಳವಡಿಸಲಾಗುವುದು.
ಸದ್ಯ ಲಭ್ಯವಿರುವ ಮಾಹಿತಿಯಂತೆಯೇ ಸೆಲೆರಿಯೊ ಸಿಎನ್‌ಜಿ ಮುಂಬರುವ ಜೂನ್ ತಿಂಗಳಲ್ಲಿ ಲಾಂಚ್ ಆಗಲಿದೆ. ಇದು 68 ಅಶ್ವಶಕ್ತಿ (90 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗರಿಷ್ಠ ಇಂಧನ ಕ್ಷಮತೆ ನೀಡಲಿದೆ.


Click it and Unblock the Notifications