2015ರಿಂದ ಮಾರುತಿಯಿಂದಲೂ ವಾಣಿಜ್ಯ ವಾಹನ ಮಾರಾಟ

By Nagaraja

ದೇಶದ ಅತಿ ದೊಡ್ಡ ಹಾಗೂ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ನಿಕಟ ಭವಿಷ್ಯದಲ್ಲೇ ವಾಣಿಜ್ಯ ವಿಭಾಗ ಮಾರುಕಟ್ಟೆಗೂ ಪ್ರವೇಶ ಪಡೆಯಲಿದ್ದು, 2015ನೇ ಸಾಲಿನಿಂದ ಕಮರ್ಷಿಯಲ್ ಟ್ರಕ್‌ಗಳನ್ನು ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ದೇಶಿಯ ಕಾರು ಮಾರಾಟದಲ್ಲಿ ಶೇಕಡಾ 40ಕ್ಕಿಂತಲೂ ಹೆಚ್ಚು ಶೇರುಗಳನ್ನು ಹೊಂದಿರುವ ಮಾರುತಿಯಿಂದ ಇಂದೊಂದು ನಿರೀಕ್ಷಿತ ನಡೆಯಾಗಿದೆ. ಈ ಮೂಲಕ ಇತರ ವಾಹನ ಸೆಗ್ಮೆಂಟ್‌ಗಳತ್ತವೂ ಮಾರುತಿ ಗಮನ ಕೇಂದ್ರಿತವಾಗುತ್ತಿದೆ. ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈಗಳಂತಹ ಸಂಸ್ಥೆಗಳಿಂದ ಪೈಪೋಟಿ ಹೆಚ್ಚುತ್ತಿರುವಂತೆಯೇ ಮಾರುತಿ ಅಪಾಯವನ್ನು ಎದುರು ಹಾಕಿಸಿಕೊಳ್ಳಲು ಬಯಸುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಇದನ್ನು ಎಚ್ಚರಿಕೆಯ ನಡೆಯಾಗಿಯೂ ಪರಿಗಣಿಸಬಹುದಾಗಿದೆ.

Maruti Suzuki

ವರದಿಗಳ ಪ್ರಕಾರ ಮಾರುತಿ, ಕಡಿಮೆ ಭಾರದ ವಾಣಿಜ್ಯ ವಾಹನಗಳು 2015ರಲ್ಲಿ ಬಿಡುಗಡೆಯಾಗಲಿದೆ. ಇದು ಮಾರುತಿ ಓಮ್ನಿ ಮಿನಿವ್ಯಾನ್ ಕಮರ್ಷಿಯಲ್ ವರ್ಷನ್ ಆಗಿರುವ ಕ್ಯಾರಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲದೆ ನೂತನ ಸಣ್ಣ ವಾಣಿಜ್ಯ ಟ್ರಕ್ಕುಗಳಿಗೆ ಹೊಸತಾದ 800ಸಿಸಿ ಡೀಸೆಲ್ ಎಂಜಿನ್ ಆಳವಡಿಸುವ ಕುರಿತಾಗಿಯೂ ಮಾರುತಿ ಮಾಹಿತಿ ನೀಡಿದೆ. ಇದು ಮಾರುತಿಯ ಗುರ್ಗಾಂವ್ ಘಟಕದಲ್ಲಿ ಜೋಡಣೆಯಾಗಲಿದೆ.

ನಿಮ್ಮ ಮಾಹಿತಿಗಾಗಿ, ದೇಶದ ವಾಣಿಜ್ಯ ಟ್ರಕ್ ಮಾರುಕಟ್ಟೆಯು ಟಾಟಾ ಮೋಟಾರ್ಸ್ ಅಧೀನತೆಯಲ್ಲಿದ್ದು, ಮಹೀಂದ್ರ, ಅಶೋಕ್ ಲೇಲ್ಯಾಂಡ್ ಮತ್ತು ಸುಜುಕಿ ಕೂಡಾ ಸಣ್ಣ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಅಂದ ಹಾಗೆ ಕ್ಯಾರಿ ತಲಹದಿಯ ಈ ಮಿನಿ ಟ್ರಕ್, ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ತಲುಪಲಿದ್ದು, ವಾರ್ಷಿಕವಾಗಿ ಒಂದು ಲಕ್ಷ ಯುನಿಟ್ ಸೇಲ್ ಮಾಡುವ ಗುರಿ ಹೊಂದಿದೆ.

Most Read Articles

Kannada
English summary
Suzuki might be India's largest car company, with over 40 percent share. But it is definitely feeling the heat from rivals in recent years and competition is only about to get tougher in the future.
Story first published: Monday, March 3, 2014, 13:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X