ಉತ್ತಮ ನಿರ್ವಹಣೆಯ ವ್ಯಾಗನಾರ್ ಬಿಡುಗಡೆ ಮಾಡಲಿರುವ ಮಾರುತಿ
ಎಲ್ಲ ವಿಭಾಗದ ಗ್ರಾಹಕರನ್ನು ಆಕರ್ಷಿಸುವಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ವಿಫಲವಾಗಿತ್ತು. ಈ ಹ್ಯಾಚ್‌ಬ್ಯಾಕ್ ಕಾರು ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಂಡರೂ ಸಹ ಎಲ್ಲೋ ಒಂದು ಕಡೆ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು.
ಈ ನಡುವೆ ಸ್ಟ್ರೀಂಗ್ರೇ ಎಂಬ ಹೊಸ ವರ್ಷನ್ ಬಿಡುಗಡೆ ಮಾಡಿದರೂ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಇವೆಲ್ಲದರ ನಡುವೆ ಮಾರುತಿ ವ್ಯಾಗನಾರ್‌ಗೆ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆಳವಡಿಸುವ ಇರಾದೆಯಲ್ಲಿದೆ.

ಈ ಎಲ್ಲ ವಿಚಾರಗಳು ಒಂದೆಡೆಯಾದರೂ ವ್ಯಾಗನಾರ್ ಮಾರಾಟಕ್ಕೆ ಇನ್ನಷ್ಟು ಆವೇಗ ತುಂಬುವ ನಿಟ್ಟಿನಲ್ಲಿ ಅತ್ಯುತ್ತಮ ನಿರ್ವಹಣೆಯ ವೆರಿಯಂಟ್ ಬಿಡುಗಡೆ ಮಾಡಲು ಯೋಜನೆಯಲ್ಲಿದೆ. ಇಲ್ಲಿ ಉತ್ತಮ ನಿರ್ವಹಣೆ ಎಂಬ ವಾಕ್ಯದಿಂದ ಗರಿಷ್ಠ ವೇಗ ಹಾಗೂ ದೊಡ್ಡ ಎಂಜಿನ್ ಸಾಮರ್ಥ್ಯದ ಎಂಜಿನ್ ಪಡೆದುಕೊಳ್ಳಲಿದೆ ಎಂದು ಅರ್ಥೈಸದರೆ ತಪ್ಪಾದಿತು.
ಯಾಕೆಂದರೆ 1999ನೇ ಇಸವಿಯಲ್ಲಿ ಲಾಂಚ್ ಆಗಿರುವ ವ್ಯಾಗನಾರ್ ಮಾದರಿಯ ಹೆಚ್ಚು ಇಂಧನ ಕ್ಷಮತೆ ಹಾಗೂ ಎಂಜಿನ್ ವಿಶ್ವಾಸಾರ್ಹಾತೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ನಿಟ್ಟಿನಲ್ಲಿ ಎಂಜಿನ್ ಟ್ಯೂನ್ ಮಾಡಲಾಗುವುದು.

ಅಷ್ಟೇ ಅಲ್ಲದೆ ಹೆಡ್‌ಲೈಟ್, ಫಾಗ್ ಲ್ಯಾಂಪ್, ಫ್ರಂಟ್ ಗ್ರಿಲ್ ಮತ್ತು ಟೈಲ್ ಲೈಟ್ ಪರಿಷ್ಕೃತಗೊಳಿಸಲಾಗುವುದು. ಇದಲ್ಲದೆ ಆಧುನಿಕತೆಯ ಭಾಗವಾಗಿ ಎಲ್‌ಇಡಿ ಲೈಟ್ ಸೌಲಭ್ಯವು ಲಭ್ಯವಾಗುವ ನಿರೀಕ್ಷೆಯಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಹೊಸ ಮಾದರಿಯು 2015 ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications








