ಮಾರುತಿಯಿಂದ 800ಸಿಸಿ ಸೆಲೆರಿಯೊ ಡೀಸೆಲ್ ಎಂಜಿನ್ ಅಭಿವೃದ್ಧಿ

By Nagaraja

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಮಾರುತಿ ಸುಜುಕಿ ಸೆಲೆರಿಯೊ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಮಾದರಿಯು ಮಾರುಕಟ್ಟೆಯಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿದೆ. ಇದರ ಬೆನ್ನಲ್ಲೇ ಗ್ರಾಹಕರಿಂದ ಈ ಹ್ಯಾಚ್‌ಬ್ಯಾಕ್ ಕಾರು ಡೀಸೆಲ್ ವೆರಿಯಂಟ್‌ನಲ್ಲೂ ಬಿಡುಗಡೆ ಮಾಡಲು ಬೇಡಿಕೆ ವ್ಯಕ್ತವಾಗಿತ್ತು.

ಇದರಂತೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯು 800ಸಿಸಿ ಸೆಲೆರಿಯೊ ಡೀಸೆಲ್ ಎಂಜಿನ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಸೆಲೆರಿಯೊ 800ಸಿಸಿ ಡೀಸೆಲ್ ಎಂಜಿನ್ ಬಿಡುಗಡೆ ಮಾಡುವ ಯೋಜನೆಯಿದೆ.

Maruti Suzuki

ಹಗುರ ಭಾರದ ವಾಣಿಜ್ಯ ವಾಹನ ವಿಭಾಗದಲ್ಲೂ ಹಂಚಿಕೊಳ್ಳಲಿರುವ ಈ ಡೀಸೆಲ್ ಎಂಜಿನ್ ದೇಶದ ಅತ್ಯಂತ ಸಣ್ಣ ಡೀಸೆಲ್ ಎಂಜಿನ್ ಆಗಿರಲಿದೆ. ಇದನ್ನು ಮಾರುತಿಯ ಗುರ್ಗಾಂವ್ ಘಟಕದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಸುಜುಕಿ ಪ್ರಕಾರ ಡೀಸೆಲ್ ನಿಯಂತ್ರಿತ ಸೆಲೆರಿಯೊ ಪ್ರತಿ ಲೀಟರ್‌ಗೆ 30 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಪರಿಸರ ಸ್ನೇಹಿ ಪ್ರಕ್ರಿಯೆಯ ಭಾಗವಾಗಿ ಸಂಸ್ಥೆಯು ಈಗಾಗಲೇ ಸೆಲೆರಿಯೊ ಸಿಎನ್‌ಜಿ ಕಿಟ್ ಪರಿಚಯಿಸಿದೆ.

ಅಂದ ಹಾಗೆ ಡೀಸೆಲ್ ನಿಯಂತ್ರಿತ ಸೆಲೆರಿಯೊ ಮಾದರಿ ಸಹ ಎಂಎಂಟಿ ವರ್ಷನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ದರ ಇತ್ಯಾದಿ ಮಹತ್ವಪೂರ್ಣ ಮಾಹಿತಿಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ. ಹಾಗಿದ್ದರೂ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವ ಸಾಧ್ಯತೆ ಕಡಿಮೆಯಾಗಿದೆ.

More from DriveSpark

Article Published On: Wednesday, June 25, 2014, 11:41 [IST]
English summary
The Celerio AMT has been a successful product for the Japanese based manufacturer Suzuki. There have been demands and request by customers that the hatchback be offered wit a diesel engine. Maruti Suzuki has been working on a small and light 800cc diesel mill.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+