ಮಾರುತಿ ಸಿಯಾಝ್ ಬುಕ್ಕಿಂಗ್ ಬಲು ಜೋರು

ಕಳೆದ ಕೆಲವು ಸಮಯಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿರುವ ಮಾರುತಿ ಸುಜುಕಿ ಸಿಯಾಝ್ ಸೆಡಾನ್ ಕಾರು ಬಿಡುಗಡೆಗೆ ಸಜ್ಜಾಗಿರುವಂತೆಯೇ ಸಂಸ್ಥೆಯು ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.

2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ಸಿಯಾಝ್ ಈಗಾಗಲೇ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಸಿಯಾಝ್ ಎಂಟ್ರಿ ಕೊಡುತ್ತಿರುವುದು ಇನ್ನಷ್ಟು ಕುತೂಹಲತೆಯನ್ನು ಎಡೆ ಮಾಡಿ ಕೊಟ್ಟಿದೆ. ವರದಿಗಳ ಪ್ರಕಾರ ಹಬ್ಬದ ಆವೃತ್ತಿಗೆ ಸಿಯಾಝ್ ಎಂಟ್ರಿ ಕೊಡಲಿದೆ.

Maruti Suzuki ciaz

ಭಾರತದಲ್ಲಿ ಸಿಯಾಝ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ. ಮಾರುತಿ ಡೀಲರುಗಳು ಮುಂಗಡವಾಗಿ ರು. 21,000 ರು.ಗಳಿಗೆ ಬುಕ್ಕಿಂಗ್ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೆ ಈಗಾಗಲೇ 3,000ದಷ್ಟು ಬುಕ್ಕಿಂಗ್ ದಾಖಲಾಗಿದೆ ಎಂಬ ವರದಿಯು ವಿತರಕರಿಂದ ಬಂದಿದೆ.

ಪ್ರಮುಖವಾಗಿ ಎಸ್‌ಎಕ್ಸ್4 ಬದಲಿ ಮಾದರಿಯಾಗಲಿರುವ ಸಿಯಾಝ್ ಸೆಡಾನ್ ಪ್ರೀಮಿಯಂ ಸೆಗ್ಮೆಂಟ್‌ ವಿಭಾಗದಲ್ಲಿ ಹೊಸ ಅನುಭವ ನೀಡಲಿದೆ. ಇದು ಹೋಂಡಾ ಸಿಟಿ ಸೆಡಾನ್ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

ಇನ್ನು 7ರಿಂದ 10 ಲಕ್ಷ ರು.ಗಳ ದರ ವ್ಯಾಪ್ತಿಯಲ್ಲೇ ಎಂಟ್ರಿ ಕೊಡುತ್ತಿರುವುದು ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ. ಇದು ಪೆಟ್ರೋಲ್ ಜೊತೆಗೆ ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Article Published On: Saturday, September 6, 2014, 10:40 [IST]
English summary
It is a known fact that Maruti Suzuki has a new product that it will launch soon. They had displayed the Ciaz as a concept at the 2014 Auto Expo in Delhi. They had promised to launch it within the year and will do it post the festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+