ಮಾರುತಿಯಿಂದ 2015 ವ್ಯಾಗನಾರ್ ನಿರೀಕ್ಷಿಸಿ

ಮಾರುತಿ ತನ್ನ ಹ್ಯಾಚ್‌ಬ್ಯಾಕ್ ಕಾರಾಗಿರುವ ಸೆಲೆರಿಯೊ ಆಟೋಮ್ಯಾಟಿಕ್ ವೆರಿಯಂಟ್‌ಗೆ ಅತಿ ಹೆಚ್ಚಿನ ಬುಕ್ಕಿಂಗ್ ಗಿಟ್ಟಿಸಿಕೊಳ್ಳುತ್ತಿದೆ. ಕೇವಲ ಸೆಲೆರಿಯೊ ಮಾತ್ರವಲ್ಲ ಸಣ್ಣ ಕಾರು ವಿಭಾಗದಲ್ಲಿ ಮಾರುತಿ ಉತ್ತಮ ಬೇಡಿಕೆ ಕಾಯ್ದುಕೊಳ್ಳುತ್ತಲೇ ಬಂದಿದೆ.

ಇದೀಗ ಬಂದಿರುವ ವರದಿಗಳ ಪ್ರಕಾರ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯು ವ್ಯಾಗನಾರ್ 2015 ಪರಿಚಯಿಸುವ ಯೋಜನೆಯಲ್ಲಿದೆ. ಇದರಂತೆ ತೆರೆಮರೆಯಲ್ಲಿ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.

Maruti Suzuki

ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುತಿ ಸುಜುಕಿ ಅತಿ ನೂತನ ಸ್ಟ್ರಿಂಗ್ರೇ ವರ್ಷನ್ ಪರಿಚಯಿಸಿತ್ತು. ಇದು ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶ ಕಂಡಿರಲಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಹೊಸತನದಿಂದ ಕೂಡಿದ ಹೊಸ ವ್ಯಾಗನಾರ್ ಪರಿಚಯಿಸುವ ಯೋಜನೆಯಲ್ಲಿದೆ. ಇದು ಒಳಮೈ ಜತೆಗೆ ಹೊರಮೈ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಬಲ್ಲ ಮೂಲಗಳ ಪ್ರಕಾರ 2015 ವ್ಯಾಗನಾರ್‌ನಲ್ಲಿ ಹೊಸ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಆದರೆ ಇಂಧನ ದಕ್ಷತೆಯಲ್ಲಿ ಯಾವುದೇ ರಾಜಿ ಮಾಡಲು ಸಂಸ್ಥೆಯು ತಯಾರಾಗಿಲ್ಲ ಎಂಬುದು ಗಮನಾರ್ಹವಾಗಿದೆ. ಹಾಗೆಯೇ ಡೀಸೆಲ್ ಹಾಗೂ ಆಟೋಮ್ಯಾಟಿಕ್ ವೆರಿಯಂಟ್ ಸಹ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಈ ಎಲ್ಲ ಬೆಳವಣಿಗೆಯು ಸೆಲೆರಿಯೊ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಯಶಸ್ಸು ಸ್ಫೂರ್ತಿ ತುಂಬುವಂತಾಗಿದೆ. ಇನ್ನು ಎಲ್‌ಇಡಿ ಲೈಟ್‌ಗಳಂತಹ ಆಧುನಿಕ ವೈಶಿಷ್ಟ್ಯಗಳು ಪಡೆದುಕೊಳ್ಳಲಿದೆ.

Article Published On: Friday, May 23, 2014, 14:04 [IST]
English summary
So now the Japanese manufacturer will launch an all new 2015 WagonR. It will receive significant exterior and interior upgrades.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+