ನಿಜವಾದಿತೇ ಮಾರುತಿ ಸ್ವಿಫ್ಟ್, ಆಲ್ಟೊ ಆಟೋಮ್ಯಾಟಿಕ್ ಕನಸು?
ಭಾರತದ ವಾಹನೋದ್ಯಮ ಚರಿತ್ರೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಎಂದೇ ವಿಶ್ಲೇಷಿಸಬಹುದಾದ ಬೆಳವಣಿಗೆಯಲ್ಲಿ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಅತ್ಯಂತ ಜನಪ್ರಿಯ ಆಲ್ಟೊ ಜೊತೆಗೆ ಸ್ವಿಫ್ಟ್ ಮಾದರಿಯಲ್ಲಿ ಆಟೋಮ್ಯಾಟಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದೆ.
ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟದ ಕೀರ್ತಿ ಪಡೆದಿರುವ ಆಲ್ಟೊ ಸಣ್ಣ ಕಾರನ್ನು ಸರಳವಾಗಿ ಚಾಲನೆ ಮಾಡಬಹುದಾಗಿದೆ. ನಗರ ಪ್ರದೇಶದ ಟ್ರಾಫಿಕ್ ಗಮನಲ್ಲಿಟ್ಟುಕೊಂಡು ಇದು ಅತಿ ಹೆಚ್ಚು ಮುಖ್ಯವೆನಿಸಲಿದೆ.

ಆಧುನಿಕ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ವೆರಿಯಂಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದೇ ಆಲ್ಟೊ 800, ಕೆ10 ಜೊತೆಗೆ ಸ್ವಿಫ್ಟ್ ಮಾದರಿಯಲ್ಲೂ ಈ ತಂತ್ರಜ್ಞಾನ ಆಳವಡಿಸುವಂತೆ ಮಾರುತಿಯನ್ನು ಪ್ರೇರೇಪಿಸುತ್ತಿದೆ.
ಇತ್ತೀಚೆಗಷ್ಟೇ ಮಾರುತಿಯಿಂದ ಬಿಡುಗಡೆಯಾಗಿದ್ದ ಸೆಲೆರಿಯೊದಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ತಂತ್ರಜ್ಞಾನ ಆಳವಡಿಸಲಾಗಿತ್ತಲ್ಲದೆ ಅತ್ಯಧಿಕ ಮಾರಾಟವನ್ನು ಗಿಟ್ಟಿಸುವಲ್ಲಿಯೂ ಯಶಸ್ವಿಯಾಗಿತ್ತು. ಈ ಹಿನ್ನಲೆಯಲ್ಲಿ ಸಾಂಪ್ರಾದಾಯಕ ಮ್ಯಾನುವಲ್ ಟ್ರಾನ್ಸ್‌ಮಿಷನ್ ಬದಲಾಗಿ ಸಣ್ಣ ಹಾಗೂ ಮಿಡ್ ಸೈಜ್ ಕಾರಿನಲ್ಲೂ ಈ ತಂತ್ರಗಾರಿಕೆ ಆಳವಡಿಕೆಯಾದರೆ ಮಾರಾಟ ಉತ್ತೇಜನ ಪಡೆದುಕೊಳ್ಳಲು ಸಂಸ್ಥೆಗೆ ನೆರವಾಗಲಿದೆ.
ಹಾಗಿದ್ದರೂ ಮ್ಯಾನುವಲ್ ತರಹನೇ ಉತ್ತಮ ಮೈಲೇಜ್ ಕಾಯ್ದುಕೊಳ್ಳುವುದು ಮಾರುತಿಗೆ ಸವಾಲಿನ ವಿಷಯವಾಗಿರಲಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಗಮನ ಕೇಂದ್ರಿಕರಿಸಬೇಕಾಗಿದೆ. ಒಟ್ಟಿನಲ್ಲಿ ಈ ಬೆಳವಣಿಗೆಗಳು ದೇಶದ ವಾಹನ ಮಾರುಕಟ್ಟೆ ದೃಷ್ಟಿಕೋನದಲ್ಲಿ ಶುಭಕರವೆನಿಸಿದೆ.


Click it and Unblock the Notifications








