ಮಾರುತಿಯಿಂದ ಹ್ಯುಂಡೈ ಎಲೈಟ್ ಐ20ಗೆ ಪ್ರತಿಸ್ಪರ್ಧಿ ಸಿದ್ಧ
ದೇಶದ ಪ್ರಯಾಣಿಕ ಮಾರುಕಟ್ಟೆಯ ಶೇಕಡಾ 50ರಷ್ಟು ಮಾರಾಟ ಶೇರನ್ನು ವಶಪಡಿಸಿಕೊಂಡಿರುವ ಮಾರುತಿ ಸುಜುಕಿ, ಸಣ್ಣ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿದೆ.
ವಿಶೇಷವೆಂದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮಾರುತಿಯ ಎಲ್ಲ ಮಾದರಿಗಳು ಅತ್ಯುತ್ತಮ ಮಾರಾಟ ದಾಖಲಿಸುತ್ತಿದೆ. ಇದರಿಂದ ಪುಳಕಿತಗೊಂಡಿರುವ ಸಂಸ್ಥೆಯು ತನ್ನ ನಿಕಟ ಪ್ರತಿಸ್ಪರ್ಧಿಗಳ ಓಟಕ್ಕೆ ಕಡಿವಾಣ ಪ್ರಯತ್ನದಲ್ಲಿದೆ.

ವರದಿಗಳ ಪ್ರಕಾರ ಮಾರುತಿ ಸಂಸ್ಥೆಯು ಹೊಸತಾದ ಹ್ಯಾಚ್‌ಬ್ಯಾಕ್ ಕಾರನ್ನು ಅಭಿವೃದ್ಧಿಗೊಳಿಸುತ್ತಿದ್ದು, ಇದು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಎಲೈಟ್ ಐ20 ಮಾದರಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ.
ಇಲ್ಲಿ ಗಮನಾರ್ಹ ಸಂತಿತಿ ಏನೆಂದರೆ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಹಾಗೂ ದೇಶದ ಅತ್ಯಂತ ದೊಡ್ಡ ರಫ್ತುದಾರ ಎಂಬ ಹಿನ್ನೆಲೆಯಲ್ಲಿ ಹ್ಯುಂಡೈ ಬೆಳವಣಿಗೆಯನ್ನು ಮಾರುತಿ ನಿಕಟವಾಗಿ ಗಮನಿಸುತ್ತಿದೆ.
ಮಾರುತಿಯ ಹೊಸ ಹ್ಯಾಚ್‌ಬ್ಯಾಕ್ ಕಾರು 'ವೈಆರ್‌ಎ' ಎಂಬ ಕೋಡ್ ಪಡೆದುಕೊಂಡಿದೆ. ಇದು ಜನಪ್ರಿಯ ಸ್ವಿಫ್ಟ್ ಮಾದರಿಗಿಂತಲೂ ದೊಡ್ಡದಾಗಿರಲಿದ್ದು, ಬೆಲೆ ಕೂಡಾ ಸ್ವಲ್ಪ ದುಬಾರಿಯೆನಿಸಲಿದೆ.
ಸಂಸ್ಥೆಯು ಆಧುನಿಕ ಕಾರಿನಲ್ಲಿರಬೇಕಾಗಿರುವ ಎಲ್ಲ ಘಟಕಗಳನ್ನು ಆಳವಡಿಸುವ ಪ್ರಯತ್ನದಲ್ಲಿದೆ. ಅಂತೆಯೇ ಕಾರಿನಡಿಯಲ್ಲಿ 1.2 ಲೀಟರ್ ಮತ್ತು 1.4 ಲೀಟರ್ ಪೆಟ್ರೋಲ್ ಎಂಜಿನ್ ಇರುವ ಸಾಧ್ಯತೆಯಿದೆ. ಇವೆಲ್ಲದರ ಜೊತೆಗೆ 1.3 ಡೀಸೆಲ್ ಎಂಜಿನ್ ಕೂಡಾ ಇರಲಿದೆ.
ಇದು ಹ್ಯುಂಡೈ ಎಲೈಟ್ ಐ20 ಮಾತ್ರವಲ್ಲದೆ ಈ ಸೆಗ್ಮೆಂಟ್‌ನಲ್ಲಿರುವ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ, ಫಿಯೆಟ್ ಪುಂಟೊ ಇವೊ (90 ಅಶ್ವಶಕ್ತಿ) ಮಾದರಿಗಳಿಗೂ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








