ಮಸೆರೆಟಿಯಿಂದ 1 ಕೋಟಿ ಬೆಲೆಬಾಳುವ ದುಬಾರಿ ಕಾರು ಲಾಂಚ್
ಜಗತ್ತಿನ ಹೆಸರಾಂತ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಸೆರೆಟಿ, ಅತಿ ದುಬಾರಿ ಗಿಬ್ಲಿ (Ghibli) ಹಾಗೂ ಗಿಬ್ಲಿ ಎಸ್ ಕಾರುಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದರ ಬೆಲೆ 98 ಲಕ್ಷ ರು.ಗಳಾಗಿವೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್ 1.15 ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.
ಈ ಐಷಾರಾಮಿ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಸದ್ಯ ಮಲೇಷ್ಯಾದಲ್ಲಿ ಲಾಂಚ್ ಆಗಿರುವ ಈ ಕಾರು ಸದ್ಯದಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಗಿಬ್ಲಿ ಆವೃತ್ತಿಗಳು, ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಹಾಗೂ ಬಿಎಂಡಬ್ಲ್ಯು 5 ಸಿರೀಸ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಪ್ರಸ್ತುತ ಮಸೆರೆಟಿ ಆವೃತ್ತಿಯು 2015ರ ವೇಳೆಯಾಗುವಾಗ 50,000 ಯುನಿಟ್‌ಗಳಷ್ಟು ಮಾರಾಟ ಮಾಡುವ ಯೋಜನೆ ಹೊಂದಿದೆ.
ಇದೇ ಮೊದಲ ಬಾರಿಗೆ ಮಸೆರೆಟಿ ಎರಡು ಕಾರುಗಳನ್ನು ನಾಲ್ಕು ಬಾಗಿಲುಗಳ ವ್ಯವಸ್ಥೆಯಲ್ಲಿ ಪರಿಚಯಿಸುತ್ತಿದೆ. ಇದು ವಿ6 3.0 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 330 ಅಶ್ವಶಕ್ತಿ (500 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 8 ಸ್ಪೀಡ್ ಆಟೋ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಇದು ಕೇವಲ 5.6 ಸೆಕೆಂಡುಗಳಲ್ಲೇ 0-100 ಕೀ.ಮೀ. ಹಾಗೆಯೇ ಗಂಟೆಗೆ ಗರಿಷ್ಠ 263 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.


Click it and Unblock the Notifications








