ಬೆಂಝ್ ಮುಂದಿನ ತಲೆಮಾರಿನ ಸ್ಪೋರ್ಟ್ಸ್ ಕಾರಿನ ಟೀಸರ್ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಿಂದ ಸಿದ್ಧಗೊಳ್ಳುತ್ತಿರುವ ಮುಂದಿನ ತಲೆಮಾರಿನ ಶಕ್ತಿಶಾಲಿ ಎಎಂಜಿ ಜಿಟಿ ಸ್ಪೋರ್ಟ್ಸ್ ಕಾರಿನ ಅನಾವರಣ ಸನ್ನಿಹಿತವಾಗಿದೆ. ಇದರಂತೆ ಈ ಲಗ್ಷುರಿ ಕಾರು ಸಂಸ್ಥೆಯು ಟೀಸರ್ ವೀಡಿಯೋ ಹಾಗೂ ಚಿತ್ರ ಬಿಡುಗಡೆಗೊಳಿಸಿರುವುದಲ್ಲದೆ ವಿಶೇಷವಾದ ಮೈಕ್ರೋಸೈಟ್ ಕೂಡಾ ರಚಿಸಿದೆ.

ಬೆಂಝ್ ಎಎಂಜಿ ಟಿಟಿ ಕಾರಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಾಗಿದೆ. ಆದರೆ ಟೀಸರ್ ವೀಡಿಯೋ ಹಾಗೂ ಚಿತ್ರ ಬಿಡುಗಡೆ ಮಾಡುವ ಮೂಲಕ ಗ್ರಾಹಕರಲ್ಲಿ ಕುತೂಹಲ ಮೂಡಿಸುವಲ್ಲಿ ಬೆಂಝ್ ಯಶಸ್ವಿಯಾಗಿದೆ.


ನಿಮ್ಮ ಮಾಹಿತಿಗಾಗಿ, ಎಸ್ಎಲ್‌ಎಸ್ ಎಎಂಜಿ ಸ್ಥಾನವನ್ನು ಎಎಂಜಿ ಜಿಟಿ ತುಂಬಲಿದೆ. ಪ್ರಮುಖವಾಗಿಯೂ ಪೋರ್ಷೆ 911 ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿರುವ ನೂತನ ಆವೃತ್ತಿಯು ಕಡಿಮೆ ಶಕ್ತಿಶಾಲಿ ಹಾಗೂ ಕಡಿಮೆ ದುಬಾರಿಯೆನಿಸಲಿದೆ. ಅಲ್ಲದೆ ಸಾಮಾನ್ಯ ಡೋರ್ ಪಡೆಯಲಿದೆ.
Mercedes

ಇದು ಟ್ವಿನ್ ಟರ್ಬೊ 4.0 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಅನೇಕ ವರ್ಷನ್‌ಗಳಲ್ಲಿ ಲಭ್ಯವಾಗಲಿದೆ. ಅಂತೆಯೇ ರಿಯರ್ ವೀಲ್ ಡ್ರೈವ್ ಜತೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಸದ್ಯ ಬಂದಿರುವ ವರದಿಗಳ ಪ್ರಕಾರ ನೂತನ ಎಎಂಜಿ ಜಿಟಿ, 2014 ಪ್ಯಾರಿಸ್ ಮೋಟಾರು ಶೋದಲ್ಲಿ ಅನಾವರಣಗೊಳ್ಳಲಿದೆ.
<center><iframe width="100%" height="450" src="//www.youtube.com/embed/NoGkwIgMCuc" frameborder="0" allowfullscreen></iframe></center>

More from DriveSpark

Article Published On: Wednesday, May 21, 2014, 12:15 [IST]
English summary
Mercedes-Benz AMG GT, the German company's next-generation flagship sports car is only getting closer to its reveal day, which is made evident by teaser images and video released on a dedicated microsite for the car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+