ಹೊಸ ಇ 350 ಸಿಡಿಐ ಬಿಡುಗಡೆ ಖಚಿತಪಡಿಸಿದ ಬೆಂಝ್

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ದೇಶದ ಮಾರುಕಟ್ಟೆಗೆ ಒಂದರ ಮೇಲೆ ಒಂದರಂತೆ ಅತ್ಯಾಕರ್ಷಕ ಕಾರುಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಸೆಪ್ಟೆಂಬರ್ 11ರಂದು ಹೊಸತಾದ ಇ 350 ಸಿಡಿಐ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

2014 ಆಟೋ ಎಕ್ಸ್ ಪೋದಲ್ಲಿ ಅನೇಕ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಪರಿಚಯಿಸಿದ್ದ ಬೆಂಝ್, ದೇಶದಲ್ಲಿ ಪ್ರಸಕ್ತ ಸಾಲನ್ನು 'ಇಯರ್ ಆಫ್ ಎಕ್ಸಲೆನ್ಸ್' ಎಂದು ಬಣ್ಣಿಸಿತ್ತು. ಇದರಂತೆ ಈಗಾಗಲೇ ಅನೇಕ ಮಾದರಿಗಳನ್ನು ಪರಿಚಯಿಸಿದೆ.

Mercedes Benz

ನೂತನ ಇ 350 ಸಿಡಿಐ ಬೆಂಝ್‌ನ ಇ ಕ್ಲಾಸ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಇದರಲ್ಲಿ ಐಚ್ಛಿಕ ಎಎಂಜಿ ಪ್ಯಾಕೇಜ್ ಲಭ್ಯವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಿನ್ಯಾಸ ಹಾಗೂ ಶೈಲಿಯನ್ನು ಗಮನಿಸಿದಾದ ಹೊಸ ಇ 350 ಸಿಡಿಐ, ಇ ಕ್ಲಾಸ್ ರೇಂಜ್‌ಗೆ ಸಮಾನವಾಗಿದೆ. ಇನ್ನು ಕಾರಿನೊಳಗೆ ಐಷಾರಾಮಿ ಸೌಲಭ್ಯಗಳ ಅನುಭವ ಪಡೆದುಕೊಳ್ಳಬಹುದಾಗಿದೆ.

ಇಂಟೆಲಿಜೆಟ್ ಡ್ರೈವ್ ಪ್ಯಾಕೇಜ್‌ನೊಂದಿಗೆ ಹೊಸ ಇ 350 ಸಿಡಿಐ ಆಗಮನವಾಗಲಿದೆ. ಇದು ಆಕ್ಟವ್ ಲೇನ್ ಕೀಪಿಂಗ್ ಅಸಿಸ್ಟ್, ಕ್ರಾಸ್ ಟ್ರಾಫಿಕ್ ಅಸಿಸ್ಟಂಟ್, ಡಿಸ್ಟ್ರೋನಿಕ್ ಪ್ಲಸ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಸ್ಟೀರಿಂಗ್ ಅಸಿಸ್ಟ್ ಸೌಲಭ್ಯಗಳನ್ನು ಹೊಂದಿರಲಿದೆ.

ಇನ್ನುಳಿದಂತೆ ಪಾದಚಾರಿ ಪತ್ತೆಹಚ್ಚುವಿಕೆ, ಬ್ಲೈಂಡ್ ಸ್ಪಾಟ್ ಎಚ್ಚರಿಕೆ, ಆಟೋಮ್ಯಾಟಿಕ್ ಪಾರ್ಕಿಂಗ್ ಮತ್ತು ಅಡಾಪ್ಟಿವ್ ಹೈ ಬೀಮ್ ಲೈಟ್ ಸೌಲಭ್ಯಗಳನ್ನು ಇದು ಪಡೆದುಕೊಳ್ಳಲಿದೆ. ಪ್ರಸ್ತುತ ಕಾರಲ್ಲಿ ನಾಲ್ಕು ಜನರಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

More from DriveSpark

Article Published On: Wednesday, September 3, 2014, 11:29 [IST]
English summary
German luxury car manufacturer Mercedes-Benz has termed the year 2014 as its ‘Year of Excellence'. They have launched several new products in India as promised at the 2014 Auto Expo, which was held in New Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+