ಬೆಂಝ್ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚಳ

Written By:

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಡಿಸ್ ಬೆಂಝ್, ಭಾರತದಲ್ಲಿ ನಿರಂತರ ಅಂತರಾಳದಲ್ಲಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುತ್ತಿದ್ದು, ಇದಕ್ಕೆ ತಕ್ಕುದಾದ ಫಲಿತಾಂಶವನ್ನು ಗಿಟ್ಟಿಸಿಕೊಳ್ಳುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಒಟ್ಟು ಎಂಟು ಹೊಸ ಹಾಗೂ ಅಪ್‌ಗ್ರೇಡ್ ಮಾದರಿಗಳನ್ನು ಬಿಡುಗಡೆ ಮಾಡಿರುವ ಬೆಂಝ್ ಶೇಕಡಾ 16ರಷ್ಟು ಮಾರಾಟ ಏರಿಕೆ ದಾಖಲಿಸಿದೆ.

To Follow DriveSpark On Facebook, Click The Like Button
Mercedes Benz

ಜನವರಿಯಿಂದ ಸೆಪ್ಟೆಂಬರ್ ತಿಂಗಳ ವರೆಗೆ ಬೆಂಝ್ 7,529 ಯುನಿಟ್‌ಗಳ ಮಾರಾಟ ದಾಖಲಿಸಿಕೊಂಡಿದೆ. ಕಳೆದ ವರ್ಷ ಅಂದರೆ 2013ರಲ್ಲಿ ಇದೇ ಅವಧಿಯಲ್ಲಿ 6,461 ಯುನಿಟ್‌ಗಳ ಮಾರಾಟ ಮಾತ್ರ ದಾಖಲಾಗಿತ್ತು. ಈ ಮೂಲಕ ಶೇಕಡಾ 16ರಷ್ಟು ವೃದ್ಧಿ ಸಾಧಿಸಿತ್ತು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಬೆಂಝ್ ಸಿಇಒ ಹಾಗೂ ವ್ಯವಸ್ಥಾಪ ನಿರ್ದೇಶಕರಾಗಿರುವ ಎಬೆರ್‌ಹಾರ್ಡ್ ಕೆರ್ನ್, 2014ನೇ ಸಾಲಿನ ಮೊದಲ ಮಾರು ತ್ರೈಮಾಸಿಕ ಅವಧಿಯಲ್ಲಿನ ಸಂಸ್ಥೆಯ ಪ್ರದರ್ಶನ ತೃಪ್ತಿದಾಯಕವಾಗಿದೆ ಎಂದಿದ್ದಾರೆ.

ಇದೇ ವೇಳೆಯಲ್ಲಿ ತನ್ನ ಮಾರಾಟ ಜಾಲವನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಹೊಂದಿರುವ ಸಂಸ್ಥೆಯು ಪ್ರಸಕ್ತ ವರ್ಷದಲ್ಲೇ ಒಂಬತ್ತು ಹೊಸ ಔಟ್ಲೆಟ್‌ಗಳನ್ನು ತೆರೆದುಕೊಳ್ಳಲಿದೆ.

English summary
The German luxury car manufacturer Mercedes-Benz India has been a benchmark performer all this year. They have so far launched eight new models along with five new dealerships, they further plan to introduce nine more outlets across India.
Story first published: Monday, October 6, 2014, 11:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark