69.6 ಲಕ್ಷದ ಬೆಂಝ್ ಜಿಎಲ್‌ಎ45 ಎಎಂಜಿ 4 ಮ್ಯಾಟಿಕ್ ಬಿಡುಗಡೆ

By Nagaraja

ನಿರಂತರ ಅಂತರಾಳದಲ್ಲಿ ಭಾರತಕ್ಕೆ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ಸದಾ ಬದ್ಧವಾಗಿರುವ ಜರ್ಮನಿಯ ಐಷಾರಾಮಿ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಹೊಸತಾದ ಜಿಎಲ್‌ಎ45 ಎಎಂಜಿ 4 ಮ್ಯಾಟಿಕ್ ಕಾರನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

ಆಲ್ ವೀಲ್ ಡ್ರೈವ್ ತಂತ್ರಗಾರಿಕೆಯನ್ನು ಹೊಂದಿರುವ ಈ 2.0 ಲೀಟರ್ ಎಂಜಿನ್ ಕಾರಿನ ಮುಂಬೈ ಎಕ್ಸ್ ಶೋ ರೂಂ ಬೆಲೆ 69.6 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಇದು ಭರ್ಜರಿ 360 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.


ಇದರೊಂದಿಗೆ ಬೆಂಝ್ ಎಎಂಜಿ ಸಾಲಿಗೆ ಮಗದೊಂದು ಕಾರಿನ ಸೇರ್ಪಡೆಯಾಗಿದೆ. ಸಾಮಾನ್ಯ ಜಿಎಲ್‌ಎ ಕ್ಲಾಸಿನ ತರಹನೇ ಹೊಸತಾದ ಜಿಎಲ್‌ಎ45 ಎಎಂಜಿ ವರ್ಷನ್ ಕೂಡಾ ಉತ್ತಮ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಐಷಾರಾಮಿ ಪ್ರಯೋಗಿಕ ಕಾರುಗಳ ಪೈಕಿ ಬೆಂಝ್ ಜಿಎಲ್‌ಎ 45 ಎಎಂಜಿ ಆಕ್ರಮಣಕಾರಿ ನೋಟವನ್ನು ಪಡೆದುಕೊಂಡಿದೆ. ಹಾಗೆಯೇ 19 ಇಂಚಿನ ಚಕ್ರಗಳು ಒಟ್ಟಾರೆ ಕಾರಿನ ನಿಲುವನ್ನು ಬದಲಾಯಿಸಲಿದೆ.


ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಹೊಸ ಬೆಂಝ್ ಜಿಎಲ್‌ಎ45 ಎಎಂಜಿ 2.0 ಲೀಟರ್ 4 ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದ್ದು, 360 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಶಕ್ತಿಶಾಲಿ ಎಂಜಿನ್ ಪಡೆದುಕೊಂಡಿದೆ ಮಾತ್ರವಲ್ಲದೆ ಅತ್ಯಂತ ಮೋಜಿನ ಪಯಣವನ್ನು ನಿಮ್ಮದಾಗಿಸಲಿದೆ.

ಆಲ್ ವೀಲ್ ಡ್ರೈವ್ ವ್ಯವಸ್ಥೆಯೊಂದಿಗೂ ಎಂಟ್ರಿ ಕೊಟ್ಟಿರುವ ಈ ಹೊಸ ಕಾರು ಮೂರು ಡ್ರೈವಿಂಗ್ ಮೋಡ್‌ಗಳನ್ನು ಪಡೆಯಲಿದೆ. ದೇಶದ ರಸ್ತೆ ಪರಿಸ್ಥಿತಿಯನ್ನು ಗಮನಿಸಿದಾಗ ಬೆಂಝ್ ಜಿಎಲ್‌ಎ45 ಬಳಕೆದಾರ ಸ್ನೇಹಿ ಕ್ರೀಡಾ ಎಸ್‌ಯುವಿ ಎನಿಸಿಕೊಳ್ಳಲಿದೆ. ಇದು ಅತ್ಯುತ್ತಮ ಗ್ರೌಂಡ್ ಕ್ಲಿಯರನ್ಸ್ ಹೊಂದಿದ್ದು, ಒರಟು ರಸ್ತೆಯಲ್ಲೂ ಹೆಚ್ಚು ಪ್ರಾಯೋಗಿಕವಾಗಿ ಕೆಲಸ ಮಾಡಲಿದೆ.


ವೈಶಿಷ್ಟ್ಯ
'ಟ್ವಿನ್ ಬ್ಲೇಡ್' ಮ್ಯಾಟ್ ಟೈಟಾನಿಯಂ ಗ್ರೇ ರೇಡಿಯೇಟರ್ ಗ್ರಿಲ್,
ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್,
ಎಎಂಜಿ ಎಕ್ಸಾಸ್ಟ್ ಸಿಸ್ಟಂ,
ಕ್ರೋಮ್ ಲೇಪಿತ ಟೈಲ್ ಲ್ಯಾಂಪ್
ದೊಡ್ಡದಾದ ರೂಫ್ ಸ್ಪಾಯ್ಲರ್,
19 ಇಂಚಿನ ಅಲಾಯ್ ವೀಲ್

ವೈಶಿಷ್ಟ್ಯ
3 ಸ್ಪೋಕ್ ನಪ್ಪ ಲೆಥರ್ ಮಲ್ಟಿಫಂಕ್ಷನ್ ಎಎಂಜಿ ನಿರ್ಹಹಣಾ ಸ್ಟೀರಿಂಗ್ ವೀಲ್ ಜೊತೆ ಕೆಂಪು ವೈವಿಧ್ಯತೆಯ ಸ್ಟಿಚ್ಚಿಂಗ್,
ಎಎಂಜಿ ಅಲ್ಯೂಮಿನಿಯಂ ಸ್ಟೀರಿಂಗ್ ವೀಲ್ ಶಿಫ್ಟ್ ಪ್ಯಾಡಲ್,
17.8 ಸೆಂಟಿಮೀಟರ್ ಸೆಂಟ್ರಲ್ ಮೀಡಿಯಾ ಡಿಸ್‌ಪ್ಲೇ,
ಎಎಂಜಿ ಮೈನ್ ಮೆನು ಮತ್ತು RACETIMER
ಪ್ಯಾನರೋಮಿಕ್ ಸನ್ ರೂಫ್,
ಆಕ್ಟಿವ್ ಪಾರ್ಕಿಂಗ್ ಅಸಿಸ್ಟ್

ಸುರಕ್ಷತೆ
ಮೂರು ಹಂತಗಳ ಇಎಸ್‌ಪಿ ಜೊತೆಗೆ ತ್ರಿ ಮೋಡ್ ಇಎಸ್‌ಪಿ ಆನ್, ಸ್ಪೋರ್ಟ್ ಹ್ಯಾಂಡ್ಲಿಂಗ್ ಮೋಡ್ ಮತ್ತು ಇಎಸ್‌ಪಿ ಆಫ್,
ಆಂಟೆಕ್ಷನ್ ಅಸಿಸ್ಟ್,
ಪ್ರಿ ಸೇಫ್ ಸಿಸ್ಟಂ
ಏಳು ಏರ್ ಬ್ಯಾಗ್
Mercedes-Benz GLA 45 AMG 4MATIC

ನಿಮ್ಮ ಮಾಹಿತಿಗಾಗಿ, ಇದು ದೇಶದಲ್ಲಿ ಬೆಂಝ್‌ನಿಂದ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗುತ್ತಿರುವ ಒಂಬತ್ತನೇ ಮಾದರಿಯಾಗಿರಲಿದೆ.

More from DriveSpark

Article Published On: Monday, October 27, 2014, 17:10 [IST]
English summary
The new Mercedes-Benz GLA 45 AMG 4MATIC was launched in India today. The new crossover is the ninth launch this year from the stables of the German manufacturer, and the fourth from its performance division, AMG.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+