ಅ. 27ರಂದು ಮರ್ಸಿಡಿಸ್ ಬೆಂಝ್ ಜಿಎಲ್‌ಎ 45 ಎಎಂಜಿ ಬಿಡುಗಡೆ

ಜರ್ಮನಿಯ ಲಗ್ಷುರಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮುಂಬರುವ 2014 ಅಕ್ಟೋಬರ್ 27ರಂದು ಅತ್ಯಾಕರ್ಷಕ ಬೆಂಝ್ ಜಿಎಲ್‌ಎ 45 ಎಎಂಜಿ 4 ಮ್ಯಾಟಿಕ್ ಮಾದರಿಯನ್ನು ಬಿಡುಗಡೆಗೊಳಿಸಲಿದೆ.

ಪ್ರಸಕ್ತ ಸಾಲಿನಲ್ಲಿ ಅನೇಕ ಮಾದರಿಗಳನ್ನು ಬಿಡುಗಡೆಗೊಳಿಸಿರುವ ಬೆಂಝ್ ಮಾರಾಟದಲ್ಲೂ ಏರಿಕೆ ಸಾಧಿಸಿತ್ತು. ಇದೀಗ ಹೆಚ್ಚು ಶಕ್ತಿಶಾಲಿ ಜಿಎಲ್‌ಎ 45 ಎಎಂಜಿ 4 ಮ್ಯಾಟಿಕ್ ಬಿಡುಗಡೆಯತ್ತ ಸಿದ್ಧತೆ ನಡೆಸುತ್ತಿದೆ.


ಬೆಂಝ್‌ನ ಈ ಪ್ರೀಮಿಯಂ ಕಾಂಪಾಕ್ಟ್ ಎಸ್‌ಯುವಿ ಕಾರು 1991 ಸಿಸಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 360 ಅಶ್ವಶಕ್ತಿ ಜೊತೆಗೆ 450 ಎನ್‌ಎನ್ ಟಾರ್ಕ್ ಹಾಗೂ 4 ಸಿಲಿಂಡರ್ ಟರ್ಬೊ ಎಂಜಿನ್ ಪಡೆಯಲಿದೆ. ಅಂತೆಯೇ ಎಎಂಜಿ ಸ್ಪೀಡ್ ಶಿಫ್ಟ್ ಡಿಸಿಟಿ 7 ಸ್ಪೀಡ್ ಸ್ಪೋರ್ಟ್ಸ್ ಟ್ರಾನ್ಸ್‌ಮಿಷನ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯು ಜಿಎಲ್‌ಎ 45 ಎಎಂಜಿ ಗರಿಷ್ಠ ವೇಗವನ್ನು ಗಂಟೆಗೆ 249 ಕೀ.ಮೀ.ಗಳಿಗೆ ವಿದ್ಯುನ್ಮಾನವಾಗಿ ನಿಯಂತ್ರಿಸಿದೆ. ಹಾಗೆಯೇ ಕೇವಲ 4.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.

mercedes benz gla 45 amg

ಸಂಸ್ಥೆಯ ಪ್ರಕಾರ ಇಯು 6 ಎಮಿಷನ್ ಸ್ಟಾಂಡರ್ಡ್ ಹೊಂದಿರುವ ಹೊಸ ಬೆಂಝ್ ಕಾರು ಪ್ರತಿ ಲೀಟರ್‌ಗೆ 15,98 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ ಸಾಂಪ್ರಾದಾಯಕ 'ಒನ್ ಮ್ಯಾನ್ ಒನ್ ಎಂಜಿನ್' ತತ್ವಶಾಸ್ತ್ರವನ್ನು ಅನುಸರಿಸಲಾಗಿದೆ.

ನುರಿತ ಜರ್ಮನ್ ಎಂಜಿನಿಯರುಗಳು ಇದರ ಎಂಜಿನ್ ಅನ್ನು ಸಂಪೂರ್ಣವಾಗಿ ಕೈಯಿಂದಲೇ ನಿರ್ಮಿಸಿದ್ದಾರೆ. ಹಾಗೆಯೇ ವೇಗ ವರ್ಧನೆಗಾಗಿ ಮೂರು ಟ್ರಾನ್ಸ್‌ಮಿಷನ್ ಮೋಡ್‌ಗಳನ್ನು ಪಡೆದುಕೊಂಡಿದೆ. ಅಂದ ಹಾಗೆ ಆಡಿ ಕ್ಯೂ3 ಮತ್ತು ಬಿಎಂಡಬ್ಲ್ಯು ಎಕ್ಸ್1 ಮಾದರಿಗಳಿಗೆ ಬೆಂಝ್ ಹೊಸ ಕಾರು ಪ್ರತಿಸ್ಪರ್ಧೆಯಾಗಿರಲಿದೆ.

Most Read Articles

Kannada
English summary
On the 27th of October, 2014 Mercedes-Benz India will be introducing us to their power packed GLA 45 AMG 4MATIC. 
Story first published: Wednesday, October 15, 2014, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X