ಸದ್ಯದಲ್ಲೇ ಬೆಂಝ್ ಜಿಎಲ್‌ಎ ಐಷಾರಾಮಿ ಕಾರು ಬಿಡುಗಡೆ
ಭಾರತದಲ್ಲಿ 2014ನೇ ವರ್ಷವನ್ನು 'ಇಯರ್ ಆಫ್ ಎಕ್ಸಲನ್ಸ್' ಎಂದು ಬಣ್ಣಿಸಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದೆ.
ಈಗಾಗಲೇ ಎಂಟು ಹೊಸ ಮಾದರಿಗಳನ್ನು ಪರಿಚಯಿಸಿರುವ ಬೆಂಝ್, ಇನ್ನೆರಡು ಮಾದರಿಗಳನ್ನು ಸದ್ಯದಲ್ಲೇ ಪರಿಚಯಿಸಲಿದೆ. ವರದಿಗಳ ಪ್ರಕಾರ 2014ನೇ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಬೆಂಝ್ ಜಿಎಲ್‌ಎ ಕ್ಲಾಸ್ ಸದ್ಯದಲ್ಲೇ ದೇಶದಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ.

2013 ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಅನಾವರಣಗೊಂಡಿದ್ದ ಬೆಂಝ್ ಜಿಎಲ್‍ಎ ಕಾಂಪಾಕ್ಟ್ ಎಸ್‌ಯುವಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗಿದ್ದರೂ ಜಾಗತಕಿವಾಗಿ ಲಭ್ಯವಿರುವ ತಲಾ ಎರಡು ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟವಾಗಲಿದೆಯೇ ಎಂಬುದು ಇನ್ನು ಖಚಿತಗೊಂಡಿಲ್ಲ.
1.6 ಲೀಟರ್ ಪೆಟ್ರೋಲ್ (156 ಅಶ್ವಶಕ್ತಿ)
2.0 ಲೀಟರ್ ಪೆಟ್ರೋಲ್ (211 ಅಶ್ವಶಕ್ತಿ)
3.2 ಲೀಟರ್ ಡೀಸೆಲ್ (136 ಅಶ್ವಶಕ್ತಿ)
4. 2.2 ಲೀಟರ್ ಡೀಸೆಲ್ (170 ಅಶ್ವಶಕ್ತಿ)

ಇನ್ನು ಬೆಲೆಯ ಬಗ್ಗೆಯೂ ನಿಖರ ಮಾಹಿತಿ ಬಂದಿಲ್ಲ. ವರದಿಗಳ ಪ್ರಕಾರ ಈ ದುಬಾರಿ ಕಾಂಪಾಕ್ಟ್ ಎಸ್‌ಯುವಿ 25ರಿಂದ 35 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.


Click it and Unblock the Notifications








