ಬೆಂಝ್ ಮೋಟಾರುಸ್ಪೋರ್ಟ್ಸ್ 120ರ ಸಂಭ್ರಮಕ್ಕೆ ಮೆರಗು ತುಂಬಿದ ಕ್ಲಾಸಿಕ್ ರಾಲಿ

By Nagaraja

ಈ ಜಂಟಿ ಸಂಭ್ರಮವನ್ನು ಆಯೋಜಿಸಲು ನಿರ್ಧರಿಸಿರುವ ಸಂಸ್ಥೆಯು ಕಳೆದ ಭಾನುವಾರ ಮುಂಬೈನಲ್ಲಿ ವಿಶೇಷ ವಿಟೇಂಜ್ ಹಾಗೂ ಕ್ಲಾಸಿಕ್ ರಾಲಿ ಹಮ್ಮಿಕೊಂಡಿತ್ತು.

ಈ ಅತಿ ವಿಶೇಷ ರಾಲಿಯಲ್ಲಿ 65ಕ್ಕೂ ಹೆಚ್ಚು ಹಳೆಯ ಕಾರುಗಳು ಭಾಗವಹಿಸಿದ್ದವು. 1929ರ ಮರ್ಸಿಡಿಸ್ ನರ್‌ಬರ್ಗ್, ಬೆಂಝ್ ಎಸ್‌ಎಲ್ ಜನರೇಷನ್, ಮೊದಲ ತಲೆಮಾರಿನ ಡಬಲ್ಯು 198, 300 ಎಸ್‌ಎಲ್, 190 ಎಸ್‌ಎಲ್, ಡಬ್ಲ್ಯು113 ಪಗೊಡಾ, ಆರ್107, ಆರ್129, ಡಬ್ಲ್ಯು123 ಮತ್ತು ಡಬ್ಲ್ಯು124 ಸೆಡಾನ್ ಪ್ರಮುಖ ಆಕರ್ಷಣೆಯಾಗಿದ್ದವು.


ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮರ್ಸಿಡಿಸ್ ಬೆಂಝ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿರುವ ಎಬೆರ್ಹಾರ್ಡ್ ಕೆರ್ನ್, ಸಮರ್ಪಣೆ, ಜವಾಬ್ದಾರಿ, ಸ್ಪರ್ಧೆ ಹಾಗೂ ಟೀಮ್ ಸ್ಪಿರಿಟ್‌ನಂತಹ ಕ್ರೀಡಾ ಗುಣಗಳನ್ನು ಬೆಂಝ್ ಸದಾ ಆನಂದಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲ ಗುಣಲಕ್ಷಣಗಳು ನಮ್ಮ ಅತ್ಯಂತ ಆಧುನಿಕ ಹಾಗೂ ಗರಿಷ್ಠ ತಂತ್ರಗಾರಿಕೆಯ ಕಾರುಗಳಿಗೆ ಆಳವಡಸಲಾಗುವುದು ಮಾತ್ರವಲ್ಲದೆ ಸಂಸ್ಥೆ ಹಾಗೂ ನೌಕರರ ಗುರಿಯನ್ನು ಪ್ರತಿಬಿಂಬಿಸುವುದಾಗಿ ತಿಳಿಸಿದ್ದಾರೆ.

ಮಾತು ಮುಂದುವರಿಸಿರುವ ಅವರು, ನಾವಿಲ್ಲಿ ಕೆಲವು ಐಕಾನಿಕ್ ಹಾಗೂ ಕ್ಲಾಸಿಕ್ ಕಾರುಗಳನ್ನು ಪ್ರದರ್ಶಿಸಿದ್ದು, ವಾಹನ ಪ್ರೇಮಿಗಳಿಗೆ ಅದ್ಭುತ ಅನುಭವ ನೀಡಿದ್ದೇವೆ ಎಂದಿದ್ದಾರೆ.
Mercedes Benz

ಎನ್‌ಸಿಪಿಎ ನರಿಮನ್ ಪಾಯಿಂಟ್‌ನಿಂದ ಆರಂಭಿಸಿದ್ದ ರಾಲಿಯು ಮರೈನ್ ಡ್ರೈವ್, ಚೌಪತ್ತಿ, ಪೆಡ್ಡರ್ ರೋಡ್, ಹಾಜಿ ಆಲಿ, ವಾರ್ಲಿ ಸೀ ಫೇಸ್, ಭಾಂದ್ರಾ ವರ್ಲಿ ಸೀ ಲಿಂಕ್ ಮಾರ್ಗವಾಗಿ ಮತ್ತೆ ಎನ್‌ಸಿಪಿಎ ಪ್ರದೇಶವನ್ನು ತಲುಪಿತ್ತು.

Article Published On: Tuesday, November 11, 2014, 10:39 [IST]
English summary
On Sunday 9th November, 2014 Mercedes-Benz India celebrated their 120 years in motorsport.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+