ಭಾರತದತ್ತ ಮುಖ ಮಾಡಿದ ಬೆಂಝ್ ಐಷಾರಾಮಿ ಕಾರುಗಳು
ಬೆಳೆಯುತ್ತಿರುವ ಭಾರತ ವಾಹನ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸ್ಥಾಪಿಸಲು ಹೊರಟಿರುವ ಜರ್ಮನಿಯ ಮೂಲದ ಲಗ್ಷುರಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, 2014ರ ಸಾಲಿನಲ್ಲಿ 10 ಹೊಸ ವಾಹನಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಬೆಂಝ್, ಸದ್ಯದಲ್ಲೇ ಕಡಿಮೆ ಬೆಲೆಯ ಎ ಕ್ಲಾಸ್ ಹಾಗೂ ಬಿ ಕ್ಲಾಸ್ ವಾಹನಗಳನ್ನು ಬಿಡುಗಡೆ ಮಾಡಲಿದೆ. ಇದು ವಿಶೇಷ ಆವೃತ್ತಿಯ ಮಾದರಿಗಳು 'ಎಡಿಷನ್ 1' ಎಂದು ಗುರುತಿಸಿಕೊಳ್ಳಲಿದೆ. ಅಲ್ಲದೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟವಾಗಲಿದೆ.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, 2014 ಜೂನ್ 24ರಂದು ಎಡಿಷನ್ 1 ಮಾದರಿಗಳನ್ನು ಬೆಂಝ್ ಬಿಡುಗಡೆ ಮಾಡಲಿದೆ. ಈ ಸೀಮಿತ ಆವೃತ್ತಿಯು ಎ180 ಸಿಡಿಐ ಮತ್ತು ಬಿ180 ಸಿಡಿಐ ಡೀಸೆಲ್ ನಿಯಂತ್ರಿತ ಎಂಜಿನ್‌ಗಳಲ್ಲಿ ಲಭ್ಯವಾಗಲಿದೆ.
ಇದೇ ಸಂದರ್ಭದಲ್ಲಿ ಜಾಗತಿಕ ಗುಣಮಟ್ಟತೆಯನ್ನು ಕಾಯ್ದುಕೊಳ್ಳುವಲ್ಲಿ ಬೆಂಝ್ ಬಂದ್ಧವಾಗಿದೆ. ಇದು ಹೊಸತಾದ ಅಲಾಯ್ ವೀಲ್, ಸ್ಪೋರ್ಟಿ ಡಿಕಾಲ್ಸ್, ಪ್ಯಾನೋರಾಮಿಕ್ ಸನ್‌ರೂಫ್ ಮತ್ತು ಎಡಿಷನ್ 1 ಬ್ಯಾಡ್ಜ್ ಗಿಟ್ಟಿಸಿಕೊಳ್ಳಲಿದೆ. ಹಾಗೆಯೇ ಕಾರಿನ ಒಳಗೂ ಹೆಚ್ಚಿನ ಐಷಾರಾಮಿ ಸೌಲಭ್ಯ ಹಾಗೂ ಆರಾಮದಾಯಕತೆಗೆ ಆದ್ಯತೆ ಕೊಡಲಾಗಿದೆ.
ಹಾಗಿದ್ದರೂ ಎಂಜಿನ್ ಮಾನಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಎ ಕ್ಲಾಸ್ ಮತ್ತು ಬಿ ಕ್ಲಸ್ ಮಾದರಿಗಳು 2.2 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 107 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋ ಗೇರ್ ಬಾಕ್ಸ್ ಪಡೆಯಲಿದೆ. ಇನ್ನು ಬೆಲೆ ಬಿಡುಗಡೆ ವೇಳೆಯಷ್ಟೇ ಬಯಲಾಗಲಿದೆ.


Click it and Unblock the Notifications








