ಮರ್ಸಿಡಿಸ್ ಬೆಂಝ್ ಸ್ಪೋರ್ಟಿ ಜಿಎಲ್‌ಇ ಕೂಪೆ ಅನಾವರಣ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮಗದೊಂದು ಆಕರ್ಷಕ ಕಾರನ್ನು ಅನಾವರಣಗೊಳಿಸಿದೆ. ಅದುವೇ ಮರ್ಸಿಡಿಸ್ ಬೆಂಝ್ ಸ್ಪೋರ್ಟಿ ಜಿಎಲ್‌ಇ ಕೂಪೆ.

ಹೆಸರಲ್ಲೇ ಸೂಚಿಸಿರುವಂತೆಯೇ ಈ ಎರಡು ಸೀಟುಗಳ ಕೂಪೆ ಕಾರಿನಲ್ಲಿ ಹೊಸ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.

Mercedes Benz GLE Coupe

ಉತ್ತರ ಅಮೆರಿಕ ಅಂತಾರಷ್ಟ್ರೀಯ ಆಟೋ ಶೋದಲ್ಲಿ ಅಧಿಕೃತವಾಗಿ ಅನಾವರಣಗೊಂಡಿರುವ ಜಿಎಲ್‌ಇ ಕೂಪೆ 2015 ಜನವರಿಯಲ್ಲಿ ನಡೆಯಲಿರುವ ಡೆಟ್ರಾಯ್ಟ್‌ನಲ್ಲೂ ಪ್ರದರ್ಶನ ಕಾಣಲಿದೆ.
Mercedes Benz GLE Coupe

ಹೊಸ ಜಿಎಲ್‌ಇ 450 ಎಎಂಜಿ 3.0 ಲೀಟರ್ ವಿ6 ಟ್ವಿನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 9ಜಿ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಂಡಿದೆ. ಇದರಲ್ಲಿ 4ಮ್ಯಾಟಿಕ್ ಆಲ್ ವೀಲ್ ಡ್ರೈವ್ ವ್ಯವಸ್ಥೆಯೂ ಇರಲಿದೆ. ಹಾಗೆಯೇ 367 ಅಶ್ವಶಕ್ತಿ (520 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.
Mercedes Benz GLE Coupe

ಆಫ್ ರೋಡ್ ವಿನ್ಯಾಸ ಶೈಲಿಯನ್ನು ಹೊಂದಿರುವ ಬೆಂಝ್ ಜಿಎಲ್‌ಇ ಕೂಪೆ ಕಾರು ನೇರವಾಗಿ ಬಿಎಂಡಬ್ಲ್ಯು ಎಕ್ಸ್6 ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ.
Most Read Articles

Kannada
English summary
German luxury car manufacturer, Mercedes-Benz is launching one product after another. They have entered new segments with their new design language and philosophy. The manufacturer is aggressively competing with its competitors.
Story first published: Friday, December 12, 2014, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X