ಬೆಂಝ್ ಎಸ್ ಕ್ಲಾಸ್ ಡೀಸೆಲ್ ಎಸ್ 350 ಸಿಡಿಐ ಲಾಂಚ್
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ತನ್ನ ಜನಪ್ರಿಯ ಎಸ್ ಕ್ಲಾಸ್‌ನ ಡೀಸೆಲ್ ಎಸ್ 350 ಸಿಡಿಐ ವೆರಿಯಂಟ್ ಲಾಂಚ್ ಮಾಡಿದೆ. ಇದರ ಪುಣೆ ಎಕ್ಸ್ ಶೋ ದರ 1.07 ಕೋಟಿ ರು.ಗಳಾಗಿವೆ.
ನೂತನ ಮರ್ಸಿಡಿಸ್ ಬೆಂಝ್ ಎಸ್ 350 ಸಿಡಿಐ 3.0 ಲೀಟರ್ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಪ್ರತಿ ನಿಮಿಷದಲ್ಲಿ 3,600 ಆವರ್ತನಕ್ಕೆ 254 ಅಶ್ವಶಕ್ತಿ ಹಾಗೆಯೇ ಪ್ರತಿ ನಿಮಿಷದಲ್ಲಿ 1,600ರಿಂದ 2,400 ಆವರ್ತನಕ್ಕೆ 620 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.

ಪ್ರಸ್ತುತ ಎಂಜಿನ್ 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಹಿಂದಿನ ಚಕ್ರಗಳಿಗೆ ಪವರ್ ವಿತರಿಸಲಿದೆ. ಸಂಸ್ಥೆಯ ಪ್ರಕಾರ ಇದು ಪ್ರತಿ ಲೀಟರ್‌ಗೆ 16.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಎಸ್ ಕ್ಲಾಸ್ ಡೀಸೆಲ್ ವೆರಿಯಂಟ್ ಕೇವಲ 6.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.
ಇದು ಪ್ರಮುಖವಾಗಿಯೂ ಆಡಿ ಎ8, ಬಿಎಡಂಬ್ಲ್ಯು 730ಎಲ್‌ಡಿ ಹಾಗೂ ನೂತನ ಜಾಗ್ವಾರ್ ಎಕ್ಸ್‌ಜೆ ಆವೃತ್ತಿಗಳಿಗೆ ಸವಾಲೊಡ್ಡಲಿದೆ. ವರದಿಗಳ ಪ್ರಕಾರ ನೂತನ ಬೆಂಝ್ 2014 ಎಸ್ 350 ಸಿಡಿಐ ವೆರಿಯಂಟ್‌ನಲ್ಲಿ ಪೂರ್ಣ ಪ್ರಮಾಣದ ಮಾಹಿತಿ ಮನರಂಜನಾ ವ್ಯವಸ್ಥೆಯಿರಲಿದ್ದು, ಜೊತೆಗೆ 10 ಇಂಚಿನ ಕಲರ್ ಡಿಸ್‌ಪ್ಲೇ ಇರಲಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇಎಸ್‌ಪಿ ಜತೆ ಎಂಟು ಏರ್ ಬ್ಯಾಗ್, ಮರ್ಸಿಡಿಸ್ ಪ್ರಿ ಸೇಫ್ ಸಿಸ್ಟಂ, ಅಡಾಪ್ಟಿವ್ ಬ್ರೇಕ್ ಜತೆ ಹೋಲ್ಡ್ ಫಂಕ್ಷನ್, ಎಎಸ್‌ಆರ್ ಹಾಗೂ ಹಿಲ್ ಸ್ಟಾರ್ಟ್ ಅಸಿಸ್ಟ್ ಸೇವೆ ಲಭ್ಯವಿರಲಿದೆ.
ಅಂದ ಹಾಗೆ ಪುಣೆಯ ಚಕನ್ ಘಟಕದಲ್ಲಿ ಎಸ್ ಕ್ಲಾಸ್ ಸ್ಥಳೀಯ ಜೋಡಣೆ ಕಾರ್ಯಕ್ರಮ ಕಳೆದ ಮಾರ್ಚ್ ತಿಂಗಳಲ್ಲೇ ಆರಂಭವಾಗಿತ್ತು. ಇದು ಹೆಚ್ಚು ಸ್ಮರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ಬೆಂಝ್‌ಗೆ ನೆರವಾಗಲಿದೆ.


Click it and Unblock the Notifications








