ವರ್ಷದೊಳಗೆ 1 ಲಕ್ಷಗಿಂತಲೂ ಹೆಚ್ಚು ಬೆಂಝ್ ಎಸ್ ಕ್ಲಾಸ್ ಮಾರಾಟ
ಜರ್ಮನಿಯ ಐಕಾನಿಕ್ ವಾಹನ ಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಸರಿ ಸುಮಾರು ಒಂದು ವರ್ಷದ ಹಿಂದೆಯಷ್ಟೇ ಎಸ್ ಕ್ಲಾಸ್ ಡಬ್ಲ್ಯು222 ಮಾದರಿಯನ್ನು ಪರಿಚಯಸಿತ್ತು.
ವರದಿಗಳ ಪ್ರಕಾರ ವಿಶ್ವದ್ಯಾಂತ ಎಸ್ ಕ್ಲಾಸ್ ಮಾದರಿಗೆ ಅಮೋಘ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿರುವ ಸಂಸ್ಥೆಯು ಒಂದು ವರ್ಷದೊಳಗೆ ಒಂದು ಲಕ್ಷಗಿಂತಲೂ ಹೆಚ್ಚು ಮಾದರಿಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಎಸ್ ಕ್ಲಾಸ್ ಶ್ರೇಣಿಯಲ್ಲಿ ಕೂಪೆ, ಫ್ಯೂಚರ್ ಕನ್ವರ್ಟಿಬಲ್ ಮತ್ತು ಉದ್ದವಾದ ವೀಲ್ ಬೇಸ್ ಹೊಂದಿರುವ ಮೇಬ್ಯಾಕ್ ಮತ್ತು ಪುಲ್‌ಮ್ಯಾನ್ ಆಗಮನವಾಗಲಿರುವಂತೆಯೇ ಎಸ್ ಕ್ಲಾಸ್ ಡಬ್ಲ್ಯು222 ಉತ್ತಮ ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಬೆಂಝ್ ಎಸ್ ಕ್ಲಾಸ್ ಡಬ್ಲ್ಯು222 ವೆರಿಯಂಟ್ ಮಾರಾಟ ನಿಧಾನಗತಿ ಸಾಧಿಸಲೇ ಇಲ್ಲ. ಇದು ವರ್ಷಾರಂಭದಲ್ಲಿ 75,000 ಯುನಿಟ್‌ಗಳ ಮಾರಾಟ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಹಾಗಿದ್ದರೂ ಸರ್ವಕಾಲಿಕ ಎಸ್ ಕ್ಲಾಸ್ ದಾಖಲೆ ಮುರಿಯ ಬೇಕಾದ್ದಲಿ 5,00000 ಯುನಿಟ್‌ಗಳ ಮಾರಾಟ ಗಡಿ ದಾಟಬೇಕಾಗಿದೆ.


Click it and Unblock the Notifications








