ಬೆಂಝ್‌ನಿಂದ 2015 ಬಿ ಕ್ಲಾಸ್ ಹ್ಯಾಚ್‌ಬ್ಯಾಕ್ ಕಾರು ಪ್ರದರ್ಶನ
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ನಿಧಾನವಾಗಿ ಭಾರತದಲ್ಲಿ ತನ್ನ ಸಾನಿಧ್ಯವನ್ನು ಭದ್ರಪಡಿಸುತ್ತಿದೆ. ಈ ನಡುವೆ ಪ್ರಸಕ್ತ ಸಾಲಿನಲ್ಲೇ ಅನೇಕ ಹೊಸ ಮಾದರಿಗಳನ್ನು ಪ್ರದರ್ಶಿಸಿರುವ ಬೆಂಝ್, ಇದೀಗ ಮಗದೊಂದು ಹ್ಯಾಚ್‌ಬ್ಯಾಕ್ ಕಾರಿನೊಂದಿಗೆ ಗ್ರಾಹಕರನ್ನು ಸಮೀಪಿಸುತ್ತಿದೆ.
ಜಗತ್ತಿನೆಲ್ಲೆಡೆ ಪ್ರೀಮಿಯಂ ಕಾರುಗಳಿಗೆ ಹೆಸರುವಾಸಿಯಾಗಿರುವ ಬೆಂಝ್, ವಿನ್ಯಾಸ ಹಾಗೂ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ಇದರಂತೆ 2015 ಬಿ ಕ್ಲಾಸ್ ಹ್ಯಾಚ್‌ಬ್ಯಾಕ್ ಕಾರನ್ನು ಅನಾವರಣಗೊಳಿಸಿದೆ.

ಪ್ರತಿ ಬಾರಿಯಂತೆಯೇ ಈ ಬಾರಿಯೂ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪ್ಯಾರಿಸ್ ಮೋಟಾರು ಶೋಗೆ ಹೊಸತನದೊಂದಿಗೆ ಆಗಮನವಾಗಲಿರುವ ಬೆಂಝ್ ತನ್ನ ಅತ್ಯಾಕರ್ಷಕ ಬಿ ಕ್ಲಾಸ್ ಮಾದರಿಯನ್ನು ಪರಿಚಯಿಸಲಿದೆ.
2015 ಬಿ ಕ್ಲಾಸ್ ಪ್ರಮುಖವಾಗಿಯೂ ಕಾಸ್ಮೆಟಿಕ್ ಬದಲಾವಣೆ ಪಡೆಯಲಿದೆ. ಇದು ಕಾರಿಗೆ ಆಧುನಿಕ ಸ್ಪರ್ಶ ನೀಡಲಿದೆ. ಒಟ್ಟು ತ್ರಿ ಡೀಸೆಲ್ ಮತ್ತು ಎರಡು ಡೀಸೆಲ್ ಎಂಜಿನ್‌ಗಳಲ್ಲಿ ಬೆಂಝ್ ಆಗಮನವಾಗಲಿದೆ.

ಪ್ರಸ್ತುತ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಡ್ರೈವ್ ಸಿಸ್ಟಂನಲ್ಲೂ ಲಭ್ಯವಾಗಲಿದೆ. ಇದು 4 ಮ್ಯಾಟಿಕ್ ಆಲ್ ವೀಲ್ ಡ್ರೈವ್ ಸಿಸ್ಟಂ ಹೊಂದಿರಲಿದೆ. ಅಂದ ಹಾಗೆ ಬಿ ಕ್ಲಾಸ್ ಭಾರತ ಪ್ರವೇಶ ಮುಂದಿನ ವರ್ಷ ಮಧ್ಯಂತರ ಅವಧಿಯಲ್ಲಷ್ಟೇ ನಡೆಯಲಿದೆ.


Click it and Unblock the Notifications