ಚಕನ್ ಘಟಕದಲ್ಲಿ ಬೆಂಝ್ 50,000 ಕಾರು ಸಂಭ್ರಮ
ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ತನ್ನ ಚಕನ್ ಘಟಕದಿಂದ 50,000ನೇ ಕಾರನ್ನು ಹೊರತಂದಿದೆ. ವಿಶೇಷವೆಂದರೆ ಸಿ-ಕ್ಲಾಸ್ ಗ್ರಾಂಡ್ ಎಡಿಷನ್ ಉತ್ಪಾದನೆ ಮೂಲಕ ಬೆಂಝ್ ತನ್ನ ಸಂಭ್ರಮ ಇಮ್ಮಡಿಗೊಳಿಸಿದೆ. ಈ ಮೂಲಕ ಇಂತಹ ಸಾಧನೆ ಮಾಡಿದ ದೇಶದ ಮೊದಲ ಐಷಾರಾಮಿ ವಾಹನ ತಯಾರಕ ಸಂಸ್ಥೆ ಎಂದೆನಿಸಿಕೊಂಡಿದೆ.
ಚಕನ್ ಘಟಕದಲ್ಲಿ 50,000ನೇ ಮೈಲುಗಲ್ಲು ಆಚರಿಸಿಕೊಳ್ಳಲು ಸಿ-ಕ್ಲಾಸ್ ಗ್ರಾಂಡ್ ಎಡಿಷನ್ ಲಾಂಚ್ ಮಾಡಲಾಗಿದೆ. ಈ ಹೈ ಎಂಡ್ ಗಾಡಿ ಎಎಂಜಿ ವೈಶಿಷ್ಟ್ಯಗಳೊಂದಿಗೆ ಆಗಮನವಾಗಲಿದೆ. ನೂತನ ಬೆಂಝ್ ಗಾಡಿಯಲ್ಲಿ ಗ್ರಾಂಡ್ ಎಡಿಷನ್ ಬ್ಯಾಡ್ಜ್ ಜತೆಗೆ ಎಎಂಜಿ ಕಿಟ್ ಸೌಲಭ್ಯವಿರಲಿದೆ. ಹಾಗೆಯೇ ಪ್ಯಾನೋರಾಮಿಕ್ ಸನ್ ರೂಫ್ ಜತೆಗೆ ಕಾರಿನ ಒಳಗಡೆ ಐಷಾರಾಮಿ ಫೀಚರ್‌ಗಳನ್ನು ಆಳವಡಿಸಲಾಗಿದೆ.

ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಅಂದರೆ 167 ಬಿಎಚ್‌ಪಿ ಉತ್ಪಾದಿಸಬಲ್ಲ (400 ಎನ್‌ಎಂ ಟಾರ್ಕ್) 2143 ಸಿಸಿ ಟರ್ಬೊ ಡೀಸೆಲ್ ಸಿ 220 ಸಿಡಿಐ ವೆರಿಯಂಟ್ ಮತ್ತು 186 ಬಿಎಚ್‌ಪಿ (285 ಎನ್‌ಎಂ ಟಾರ್ಕ್) ಉತ್ಪಾದಿಸಬಲ್ಲ ಸಿ 200 ಸಿಜಿಐ 1796 ಸಿಸಿ ಫೋರ್ ಸಿಲಿಂಡರ್ ಪೆಟ್ರೋಲ್ ಯುನಿಟ್ ಪಡೆದುಕೊಳ್ಳಲಿದೆ.
ಅಂತಿಮವಾಗಿ ನೂತನ ಸಿ ಕ್ಲಾಸ್ ಗ್ರಾಂಡ್ ಎಡಿಷನ್ 220 ಸಿಡಿಐ ಎಕ್ಸ್ ಶೋ ರೂಂ ದರ 39.16 ಹಾಗೂ ಸಿ200 ಸಿಜಿಐ ವೆರಿಯಂಟ್‌ಗೆ 36.81 ಲಕ್ಷ ರು.ಗಳ ವರೆಗಿದೆ.


Click it and Unblock the Notifications








