ಮರ್ಸಿಡಿಸ್ ಜಿ ಕ್ಲಾಸ್‌ಗೆ 35 ವರ್ಷಗಳ ಸಂಭ್ರಮ
ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಪ್ರಸಕ್ತ ಸಾಲಿನಲ್ಲಿ ಹೆಚ್ಚು ಹೆಸರು ಗಿಟ್ಟಿಸಿಕೊಂಡಿರುವ ತನ್ನ ಜನಪ್ರಿಯ ಆಫ್ ರೋಡರ್ ಜಿ ಕ್ಲಾಸ್‌ನ 35ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳಲಿದೆ.
ಈ ವಿಶೇಷ ಸಂದರ್ಭವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಹಿನ್ನಲೆಯಲ್ಲಿ ವಿಶೇಷ ಆವೃತ್ತಿಯನ್ನು ಜರ್ಮನಿಯ ಈ ವಾಹನ ತಯಾರಿಕ ಸಂಸ್ಥೆ ಬಿಡುಗಡೆ ಮಾಡಲಿದೆ.

ಇದು ಎಕ್ಸ್‌ಟೀರಿಯರ್ ಜೊತೆಗೆ ಇಂಟಿರಿಯರ್ ಅಚ್ಚರಿಗಳನ್ನು ಪಡೆದುಕೊಳ್ಳಲಿದೆ. ನಿಮ್ಮ ಕಣ್ಣು ಕುಕ್ಕುವಂತೆ ಮಾಡುವ ಬಣ್ಣಗಳು ಇದರಲ್ಲಿ ಪ್ರಮುಖವಾಗಿರಲಿದೆ.
1979ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದ ಜಿ ಕ್ಲಾಸ್ ಈಗಲೂ ಬಹುತೇಕ ಸಮಾನ ವಿನ್ಯಾಸ ಕಾಪಾಡಿಕೊಂಡು ಬಂದಿದೆ. ಇದೀಗ ಆಗಮನವಾಗಲಿರುವ ಜಿ ಕ್ಲಾಸ್ ಎಡಿಷನ್ 35, ಕ್ರೀಡಾ ಪ್ಯಾಕೇಜ್ ಪಡೆದುಕೊಳ್ಳಲಿದೆ. ಇದರಲ್ಲಿ ಎಎಂಜಿ ವೀಲ್ ಆರ್ಚ್ ಫ್ಲೇರಿಂಗ್, ಕ್ರೋಮ್ ಪ್ಯಾಕೇಜ್ ಮತ್ತು ಕ್ರೋಮ್ ಹೆಡ್‌ಲೈಟ್ ಇರಲಿದೆ.

ಕಾರಿನೊಳಗಡೆ ಗರಿಷ್ಠ ಗುಣಮಟ್ಟದ ಚರ್ಮದ ಹೋದಿಕೆ, ಎರಡು ವಿಭಿನ್ನ ಒಳಮೈಗಳು ಲಭ್ಯವಾಗಲಿದೆ. ಗ್ರಾಹಕರಿಗೆ ಟು ಟೋನ್ ಪೋರ್ಸೆಲೈನ್ ಬ್ಲಾಕ್ ಕಾಂಬಿನೇಷನ್ ಅಥವಾ ಸಿಂಗಲ್ ಟೋನ್ ಬ್ಲ್ಯಾಕ್ ಇಂಟಿರಿಯರ್ ಆಯ್ಕೆ ಮಾಡುವ ಅವಕಾಶವಿರಲಿದೆ.


Click it and Unblock the Notifications