ಜೂನ್ 5ಕ್ಕೆ ಬೆಂಝ್ ಎಸ್350 ಡೀಸೆಲ್ ಲಾಂಚ್
ಜರ್ಮನಿಯ ಲಗ್ಷುರಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಸದ್ಯದಲ್ಲೇ ಎಸ್350 ಆವೃತ್ತಿಯನ್ನು ಡೀಸೆಲ್ ಎಂಜಿನ್‌ನಲ್ಲಿ ಪರಿಚಯಿಸಲಿದೆ. ಬಲ್ಲ ಮೂಲಗಳ ಪ್ರಕಾರ ಹೊಸ ಎಸ್ ಕ್ಲಾಸ್ 2014 ಜೂನ್ 5ರಂದು ಲಾಂಚ್ ಆಗಲಿದೆ.
ಜರ್ಮನಿಯ ಐಷಾರಾಮಿ ಸಂಸ್ಥೆಯು ಈಗಾಗಲೇ ಎಸ್500 ಹಾಗೂ ವಿ222 ಎಶ್ ಕ್ಲಾಸ್ ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಆಗಮನವಾಗಲಿರುವ ಡೀಸೆಲ್ ವೆರಿಯಂಟ್, ಪೆಟ್ರೋಲ್‌ಗಿಂತಲೂ ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಎಸ್350 ಆವೃತ್ತಿಯು ಎಸ್500ಗಿಂತಲೂ ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆ. ಹಾಗೆಯೇ ಎಸ್500ಗಿಂತಲೂ ಕಡಿಮೆ ದರಗಳಲ್ಲಿ ಆಗಮನವಾಗುವುದು ಬಹುತೇಕ ಖಚಿತವಾಗಿದೆ.
ಬೆಂಝ್ ವಿತರಕರು ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದು, ಬಿಡುಗಡೆ ಬೆನ್ನಲ್ಲೇ ವಿತರಣೆಯನ್ನು ಆರಂಭಿಸಲಿದೆ. ಇದೀಗ 1.25 ಕೋಟಿ ರು.ಗಳ ದರ ಅಂದಾಜಿನಲ್ಲಿ ಬಿಡುಗಡೆಯಾಗಲಿರುವ ನೂತನ ಕಾರು ಪ್ರಯಾಣಿಕರಿಗೆ ಅತ್ಯುತ್ತಮ ಚಾಲನಾ ಅನುಭವ ಪ್ರದಾನ ಮಾಡಲಿದೆ.
ಅಂದ ಹಾಗೆ ಎಸ್350 ಡೀಸೆಲ್ ವರ್ಷನ್ 2,987 ಸಿಸಿ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 258 ಪಿಎಸ್ ಪವರ್ (620 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಬೆಂಝ್‌ನ 7ಜಿ ಟ್ರಾನಿಕ್ ಪ್ಲಸ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.
ನೂತನ ಎಸ್350, ಕೇವಲ 6.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗತೆಯಲ್ಲಿ ಚಲಿಸಲು ಸಾಧ್ಯವಾಗಲಿದೆ. ಇದು ಇತ್ತೀಚೆಗಷ್ಟೇ ಲಾಂಚ್ ಆಗಿರುವ ಜಾಗ್ವಾರ್ ಎಕ್ಸ್‌ಜೆ-ಎಲ್, ಬಿಎಂಡಬ್ಲ್ಯು 7 ಸಿರೀಸ್ ಹಾಗೂ ಆಡಿ ಎ8ಎಲ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯೆನಿಸಲಿದೆ.


Click it and Unblock the Notifications