ಲಾಸ್ ಏಜಂಲೀಸ್‌ನಲ್ಲಿ ಬೆಂಝ್-ಮೇಬ್ಯಾಕ್ ಎಸ್-ಕ್ಲಾಸ್ ಅನಾವರಣ
ಮಗದೊಂದು ಐಕಾನಿಕ್ ಕಾರಿನ ಪುನರಾಗಮನಕ್ಕೆ ಲಾಸ್ ಏಂಜಲೀಸ್ ಆಟೋ ಶೋ ಸಾಕ್ಷಿಯಾಗಿದೆ. ಇಲ್ಲಿ ನಡೆದ 2014 ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಮರ್ಸಿಡಿಸ್ ಬೆಂಝ್-ಮೇಬ್ಯಾಕ್ ಎಸ್ ಕ್ಲಾಸ್ ಭರ್ಜರಿ ಅನಾವರಣಗೊಂಡಿದೆ.
ನಿಮ್ಮ ಮಾಹಿತಿಗಾಗಿ 2012ನಲ್ಲಿ ಮೇಬ್ಯಾಕ್ ಬ್ರಾಂಡ್ ಮಾರಾಟವನ್ನು ನಿಲುಗಡೆಗೊಳಿಸಲಾಗಿತ್ತು. ಇದೀಗ ಹೊಸ ಆಶಾಭಾವನೆ ಹೊತ್ತುಕೊಂಡಿರುವ ಜರ್ಮನಿಯ ಸಂಸ್ಥೆಯು 2015 ಫೆಬ್ರವರಿ ತಿಂಗಳಿಂದ ಮಾರುಕಟ್ಟೆಗೆ ತಲುಪಲಿದೆ.

ಇದು ಟ್ವಿನ್ ಟರ್ಬೊ 6.0 ಲೀಟರ್ ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 522 ಬಿಎಚ್‌ಪಿ (830 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಇದರ ಸೆವೆನ್ ಸ್ಪೀಡ್ ಎಎಂಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕೇವಲ 5.0 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸಲಿದೆ.
ಹಾಗಿದ್ದರೂ ಬೆಂಝ್ ಸಂಸ್ಥೆಯು ಇದುವರೆಗೆ ಬೆಲೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಿದ್ದರೂ 1.23 ಕೋಟಿ ರು.ಗಳ ವರೆಗೆ ದುಬಾರಿಯಾಗುವ ಸಾಧ್ಯತೆಯಿದೆ. ಅಲ್ಲದೆ ಸದ್ಯದಲ್ಲೇ ವಿಆಆರ್9 ದರ್ಜೆಯ ರಕ್ಷಣೆಯೊಂದಿಗೆ ಆರ್ಮರ್ಡ್ ವರ್ಷನ್ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

ಅದ ಹಾಗೆ ಮೇ ಬ್ಯಾಕ್ ಎಸ್ ಕ್ಲಾಸ್ ವಿ8 4.6 ಲೀಟರ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಿರಲಿದ್ದು, ಇದು 448.59 ಅಶ್ವಶಕ್ತಿ (700 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.
ಎಸ್ ಕ್ಲಾಸ್‌ಗೆ ಸಮಾನವಾದ ಶೈಲಿಯನ್ನು ಹೊಂದಿರುವ ಮೇಬ್ಯಾಕ್ ಎಸ್600, ಹೆಚ್ಚು ಸ್ಥಳಾವಕಾಶವನ್ನು ಹೊಂದಿರಲಿದೆ. ಇದು 7 ಜಿ ಟ್ರಾನಿಕ್ ಪ್ಲಸ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗಿಟ್ಟಿಸಿಕೊಳ್ಳಲಿದೆ. ಹಾಗೆಯೇ ಎಸ್500 9 ಸ್ಪೀಡ್ ಆಟೋ ಹಾಗೂ 9ಜಿ ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.


Click it and Unblock the Notifications








