ಬಿಡುಗಡೆಗೂ ಮುನ್ನ ಮರ್ಸಿಡಿಸ್-ಮೇಬ್ಯಾಕ್ ಎಸ್600 ಒಳಮೈ ಲೀಕ್
ಜಾಗತಿಕವಾಗಿ ಮರ್ಸಿಡಿಸ್ ಎಸ್ ಕ್ಲಾಸ್ ಕಾರನ್ನು 2013ನೇ ಇಸವಿಯಲ್ಲಿ ಬಿಡುಗಡೆ ಮಾಡಿತ್ತು. ಕೆಲವೇ ಸಮಯಗಳಲ್ಲಿ ಅತ್ಯುತ್ತಮ ಕಾರೆಂಬ ಮನ್ನಣೆಗೂ ಅರ್ಹವಾಗಿತ್ತು. ಜರ್ಮನಿಯ ಐಷಾರಾಮಿ ಸಂಸ್ಥೆಯು ಎಸ್ ಕ್ಲಾಸ್‌ನ ಅನೇಕ ವೆರಿಯಂಟ್‌ಗಳನ್ನು ಒದಗಿಸುತ್ತಿದೆ.
ಈ ನಡುವೆ 2014 ಲಾಸ್ ಏಜಂಲೀಸ್ ಆಟೋ ಶೋಗೆ ಕ್ಷಣಗಣನೆ ಆರಂಭವಾಗಿದೆ. ಇದು ನವೆಂಬರ್ 21ರಿಂದ 30ರ ವರೆಗೆ ಆಯೋಜನೆಯಾಗಲಿದೆ. ಇದರಂತೆ 2014 ನವೆಂಬರ್ 18ರಿಂದ 20ರ ವರೆಗೆ ಮಾಧ್ಯಮ ಮಿತ್ರರಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ವೇಳೆಯಲ್ಲಿ ಜಗತ್ತಿನ ಮುಂಚೂಣಿಯ ಸಂಸ್ಥೆಗಳು ತಮ್ಮ ಹೊಸ ಕಾನ್ಸೆಪ್ಟ್‌ಗಳನ್ನು ಪ್ರದರ್ಶಿಸಲಿದೆ. ಜರ್ಮನಿಯ ಲಗ್ಷುರಿ ಸಂಸ್ಥೆಯಾಗಿರುವ ಮರ್ಸಿಡಿಸ್-ಮೇಬ್ಯಾಕ್ ಎಸ್600 ಲಿಮೊಸಿನ್ ಮಾದರಿ ಇದೇ ವೇಳೆಯಲ್ಲಿ ಬಿಡುಗಡೆಯಾಗಲಿದೆ.
ಇದಕ್ಕೂ ಮುನ್ನಡಿಯಾಗಿ ಕಾರಿನ ಆಕರ್ಷಕ ಒಳಮೈ ಬಹಿರಂಗಪಡಿಸಲಾಗಿದೆ. ನಿಮ್ಮ ಮಾಹಿತಿಗಾಗಿ, ಈ ಹಿಂದೆ 2012ರಲ್ಲಿ ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಮೇಬ್ಯಾಕ್ ಶ್ರೇಣಿಯ ವಾಹನಗಳನ್ನು ಹಿಂಪಡೆಯಲಾಗಿತ್ತು.
ಆದರೆ ಇದೀಗ ಉಪ ಬ್ರಾಂಡ್ ಆಗಿ ಮೇಬ್ಯಾಕ್ ಕಾರುಗಳನ್ನು ಬೆಂಝ್ ಮಾರಾಟ ಮಾಡಲಿದೆ. ನೂತನ ಎಸ್600 ಮಾದರಿಯು ವಿ12, 6.0 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 530 ಅಶ್ವಶಕ್ತಿ (830 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.


Click it and Unblock the Notifications








