ಮರ್ಸಿಡಿಸ್ ಬೆಂಝ್ ಭವಿಷ್ಯದ ಟ್ರಕ್‌ಗಳು ಹೇಗಿರಬೇಕು?
ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆಯೇ ವಾಹನ ಜಗತ್ತಿನಲ್ಲೂ ಹೊಸ ಹೊಸ ತಂತ್ರಾಂಶಗಳ ಅವಿಷ್ಕಾರವಾಗುತ್ತಿದೆ. ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಭವಿಷ್ಯದ ವಾಹನಗಳನ್ನು ಸಂಶೋಧನೆ ಮಾಡುವಲ್ಲಿ ಮಗ್ನವಾಗಿದೆ.
ಅದ್ಭುತ ಚಾಲನಾ ಅನುಭವದ ಜೊತೆಗೆ ಗರಿಷ್ಠ ಸುರಕ್ಷತೆ ಪ್ರದಾನ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಇದನ್ನೇ ಗಮನದಲ್ಲಿರಿಸಿಕೊಂಡಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಭವಿಷ್ಯದ ಟ್ರಕ್‌ಗಳನ್ನು ಪರಿಚಯಿಸಿದೆ.

ಸಾಮಾಗ್ರಿ ಹೊತ್ತೊಯ್ಯುವ ಟ್ರಕ್ಕುಗಳಿಗೆ ದೀರ್ಘ ಪ್ರಯಾಣ ಸಾಮಾನ್ಯವಾಗಿದ್ದರಿಂದ ಇದಕ್ಕೆ ಅನುಸಾರವಾದ ಗರಿಷ್ಠ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ. ಇದು ಆಟೋ ಪೈಲಟ್, ವಿ2ವಿ/ವಿ2ಐ ಕಮ್ಯೂನಿಕೇಷನ್ ಹಾಗೂ ರಿವರ್ಸ್ ಪಾರ್ಕಿಂಗ್ ಸ್ಪಾಟ್ ಮುಂತಾದ ತಂತ್ರಜ್ಞಾನಗಳನ್ನು ಪಡೆದುಕೊಂಡಿದೆ.

ಹೈವೇ ಪೈಲಟ್
ನಿಮ್ಮ ಪಯಣ ಆರಂಭವಾದ ತಕ್ಷಣ ಹೈವೇ ಪೈಲಟ್ ಆನ್ ಆಗಲಿದೆ. ಇದು ಚಾಲಕರಿಗೆ ಹೈವೈ ಪೈಲಟ್ ಲಭ್ಯತೆಯ ಬಗ್ಗೆ ಸೂಚನೆ ನೀಡಲಿದೆ. ಒಮ್ಮೆ ಇದರ ತಂತ್ರಾಂಶವು ಸ್ಥಳ ಗುರುತಿಸಿದ ಬಳಿಕ ಜಿಪಿಎಸ್ ಮ್ಯಾಪಿಂಗ್ ಮಾಡಲು ನೆರವಾಗಲಿದೆ.

ಹೈವೇ ಪೈಲಟ್
ಹೈವೇ ಪೈಲಟ್ ಆನ್ ಆದ ಬಳಿಕ ಚಾಲಕರು ಕೈಕಟ್ಟಿ ಸುಮ್ಮನೇ ಕುಳಿತುಕೊಳ್ಳಬಹುದಾಗಿದೆ. ಅಂದರೆ ಹ್ಯಾಂಡ್ಸ್ ಫ್ರಿ ಚಾಲನೆ ಪ್ರದಾನ ಮಾಡಲಿದೆ. ಇದಾದ ಬಳಿಕ ಟ್ರಕ್ ಅದೇ ವೇಗವನ್ನು ಕಾಯ್ದುಕೊಳ್ಳಲಿದ್ದು, ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಿದೆ. ಇಲ್ಲಿ ಚಾಲಕ ವಿಶ್ರಾಂತಿ ಬಯಸಿದ್ದಲ್ಲಿ ಆಸನವನ್ನು 45 ಡಿಗ್ರಿ ಹಿಂದಕ್ಕೆ ಬಾಗಿಸಬಹುದಾಗಿದೆ. ಇವೆಲ್ಲವೂ ಒಂದು ಪುಶ್ ಬಟನ್‌ನಲ್ಲಿ ನೆರವೇರಲಿದೆ.

V2V ಮತ್ತು V2I ಕಮ್ಯೂನಿಕೇಷನ್
ಭವಿಷ್ಯದ ಟ್ರಕ್‌ಗಳು ಮೂಲತ: ಸೆನ್ಸಾರ್‌ಗಳಿಂದ ಸಂಪರ್ಕ ಸಾಧಿಸುತ್ತದೆ. ಇದರಲ್ಲಿರುವ ಕ್ಯಾಮೆರಾ ಹಾಗೂ ರಿಯರ್ ಟೈಮ್ ಮ್ಯಾಪ್ ನೆರವಿನಿಂದ ಇತರ ವಾಹನ ಹಾಗೂ ಕಟ್ಟಡಗಳ ಸಾನಿಧ್ಯವನ್ನು ಅರಿಯಬಹುದಾಗಿದೆ. ಇಲ್ಲಿ ವಿ2ವಿ ಎಂಬುದು ವಾಹನದಿಂದ ವಾಹನಕ್ಕೆ ಅಂತೆಯೇ ವಿ2ಐ ಎಂಬುದು ವಾಹನಗಳಿಂದ ಮೂಲ ಸೌಲಭ್ಯ ಸಂಪರ್ಕಿಸಬಹುದಾಗಿದೆ. ಇವೆಲ್ಲಕ್ಕೂ ಟ್ರಕ್‌ನಲ್ಲಿರುವ ಟ್ಯಾಬ್ಲೆಟ್ ಕೆಲಸ ಮಾಡಲಿದೆ.

V2V ಮತ್ತು V2I ಕಮ್ಯೂನಿಕೇಷನ್
ಇದರ ಮಗದೊಂದು ವೈಶಿಷ್ಟ್ಯವೆಂದರೆ ತುರ್ತು ಪರಿಸ್ಥಿತಿಗಳಲ್ಲಿ ಸಾಗುವ ಆಂಬುಲೆನ್ಸ್ ಅಥವಾ ಪೊಲೀಸ್ ವಾಹನಗಳನ್ನು ಗುರುತಿಸಿಕೊಂಡು ಸ್ವಯಂಚಾಲಿತವಾಗಿ ಬದಿಗೆ ಸರಿಯುವ ಮೂಲಕ ಹಾದಿ ಬಿಟ್ಟುಕೊಡಲಿದೆ.

ಹೋಗುವಾಗಲೇ ರಿವರ್ಸ್ ಪಾರ್ಕಿಂಗ್ ಆಜ್ಞೆ
ಇದೇ ಟ್ಯಾಬ್ಲೆಟ್ ನೆರವಿನಿಂದ ಮುಂದೆ ಎಲ್ಲಿ ಗಾಡಿ ನಿಲ್ಲಿಸಬೇಕು ಹಾಗೂ ರಿವರ್ಸ್ ಪಾರ್ಕಿಂಗ್ ಬಗ್ಗೆ ಆಜ್ಞಾಪಿಸಬಹುದಾಗಿದೆ. ಇದು ಪ್ರಾಯೋಗಿಕವಾಗಿ ಎಷ್ಟು ಯಶ ಕಾಣಲಿದೆ ಎಂಬುದು ಸ್ವಲ್ಪ ಗೊಂದಲಕ್ಕೀಡು ಮಾಡುತ್ತಿದೆ.

ಮುಂದಿನ ಪಯಣ ಯೋಜನೆ
ಚಾಲಕ ಆರಂಭದಲ್ಲೇ ತನ್ನ ಮುಂದಿನ ಪಯಣವನ್ನು ಯೋಜನೆ ಮಾಡಬಹುದಾಗಿದೆ. ಉದಾಹರಣೆಗೆ ಪಯಣದ ಮೊದಲೇ ತಾಪಮಾನ ಆಯ್ಕೆ ಮಾಡಿಟ್ಟುಕೊಂಡರೆ ನಿಮ್ಮ ಬಿಡುವಿನ ಬಳಿಕ ಟ್ರಕ್ ಬಳಿ ಬಂದಾಗ ಟ್ರಕ್‌ನೊಳಗೆ ನೀವು ಬಯಸಿದ ವಾತಾವರಣದ ಅನುಭವ ಸಿಗಲಿದೆ.

ಈ ಎಲ್ಲದರ ನೆರವಿನಿಂದ ಬೆಂಝ್ ಡೈಮ್ಲರ್ ಟ್ರಕ್ಕುಗಳು ತಾಂತ್ರಿಕತೆಯಿಂದ ಇತರ ವಾಹನಗಳನ್ನು ಮೀರಿ ನಿಲ್ಲಲಿದೆ. ಹಾಗೆಯೇ ಹೆಚ್ಚು ಸುರಕ್ಷಿತ ಪಯಣ ಖಾತ್ರಿಪಡಿಸಲಿದೆ.


Click it and Unblock the Notifications








